ಕೊರೋನಾ ವೈರಸ್: ಉಯ್ಘರ್ ಮುಸ್ಲಿಮರ ಮೇಲಿನ ಹಿಂಸೆಗೆ ’ಅಲ್ಲಾಹ್’ ಕೊಟ್ಟ ಶಿಕ್ಷೆ! 
ದೇಶ

ಕೊರೋನಾ ವೈರಸ್: ಉಯ್ಘರ್ ಮುಸ್ಲಿಮರ ಮೇಲಿನ ಹಿಂಸೆಗೆ ’ಅಲ್ಲಾಹ್’ ಕೊಟ್ಟ ಶಿಕ್ಷೆ! 

ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಉಯ್ಘರ್ ಮುಸ್ಲಿಮರ ಮೇಲಿನ ಹಿಂಸಾಚಾರಕ್ಕೆ ಅಲ್ಲಾಹ್ ಕೊಟ್ಟ ಶಿಕ್ಷೆ ಎಂದು ಮುಸ್ಲಿಮ್ ಮೌಲ್ವಿಯೊಬ್ಬರು ಹೇಳಿದ್ದಾರೆ. 

ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಉಯ್ಘರ್ ಮುಸ್ಲಿಮರ ಮೇಲಿನ ಹಿಂಸಾಚಾರಕ್ಕೆ ಅಲ್ಲಾಹ್ ಕೊಟ್ಟ ಶಿಕ್ಷೆ ಎಂದು ಮುಸ್ಲಿಮ್ ಮೌಲ್ವಿಯೊಬ್ಬರು ಹೇಳಿದ್ದಾರೆ. 

ವಿವಾದಾತ್ಮಕ ಮುಸ್ಲಿಮ್ ಮೌಲ್ವಿ ಇಲ್ಯಾಸ್ ಶರಾಫುದ್ದೀನ್ ಕೊರೋನಾ ವೈರಸ್ ನ್ನು ಚೀನಾ ಜನತೆಗೆ ಅಲ್ಲಾಹ್ ನೀಡಿರುವ ಶಾಪ ಎಂದು ಹೇಳಿದ್ದು, 20 ಮಿಲಿಯನ್ ಮುಸ್ಲಿಮರ ಜೀವನವನ್ನು ನಾಶ ಮಾಡಲು ಚೀನಾ ಯತ್ನಿಸಿದ್ದರು. ಮುಸ್ಲಿಮರನ್ನು ಬೆದರಿಸಿದ್ದರು. ಅವರ ಮಸೀದಿಗಳನ್ನು ಚೀನಾದಲ್ಲಿ ಹೊಡೆದುರುಳಿಸಲಾಗಿತ್ತು. ಪವಿತ್ರ ಗ್ರಂಥಗಳನ್ನು ಸುಟ್ಟಿದ್ದರು. ಮದ್ಯಪಾನ ಮಾಡುವುದಕ್ಕೆ ಒತ್ತಾಯಿಸಿದ್ದರು. ಯಾರೂ ತಮ್ಮನ್ನು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಭಾವಿಸಿದ್ದರು. ಆದರೆ ಸರ್ವಶಕ್ತನಾದ ಅಲ್ಲಾಹ್ ಶಿಕ್ಷೆ ಕೊಟ್ಟಿದ್ದಾನೆ ಎಂದು ಇಲ್ಯಾಸ್ ಹೇಳಿದ್ದಾರೆ. 

ರೋಮನ್ನರು, ಪರ್ಷಿಯನ್ನರು, ರಷ್ಯನ್ನರು ಎಲ್ಲರೂ ಇಸ್ಲಾಂ ಗೆ ವಿರುದ್ಧವಾಗಿ ನಿಂತು ಅಲ್ಲಾಹ್ ನಿಂದ ನಾಶವಾದರು ಎಂದು ಇಲ್ಯಾಸ್ ಹೇಳಿದ್ದು, ಭಾರತದಲ್ಲಿರುವ ಬಲಪಂಥೀಯರಿಗೂ ಎಚ್ಚರಿಕೆ ನೀಡಿದ್ದಾರೆ. ಬಲಪಂಥೀಯರನ್ನು ಗೋಡ್ಸೆಯ ಮಕ್ಕಳೆಂದು ಹೇಳಿರುವ ಅವರು ಭಾರತದಲ್ಲೂ ಮುಸ್ಲಿಮರ ವಿರುದ್ಧ ದಾಳಿ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel