ದೇಶ

ಸಿಎಎ ವಿರೋಧಿ ಪ್ರತಿಭಟನಾಕಾರರು-ತೃಣಮೂಲ ಬೆಂಬಲಿಗರ ಘರ್ಷಣೆ, ಗುಂಡೇಟಿಗೆ ಇಬ್ಬರು ಬಲಿ

ಸಿಟಿಜನ್ ಫೋರಮ್ ನ ಸಿಎಎ ವಿರೋಧಿ ಪ್ರತಿಭಟನಾಕಾರರು ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗುಂಡೇಟಿನಿಂದ ಸತ್ತು ಇತರ ಮೂವರು ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆ ಜಲಂಗಿಯಲ್ಲಿ  ನಡೆದಿದೆ.

ಕೋಲ್ಕತ್ತಾ: ಸಿಟಿಜನ್ ಫೋರಮ್ ನ ಸಿಎಎ ವಿರೋಧಿ ಪ್ರತಿಭಟನಾಕಾರರು ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗುಂಡೇಟಿನಿಂದ ಸತ್ತು ಇತರ ಮೂವರು ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆ ಜಲಂಗಿಯಲ್ಲಿ  ನಡೆದಿದೆ.

ರಸ್ತೆ ತಡೆ ನಡೆಸಿದ್ದ ಪ್ರತಿಭಟನಾಕಾರರ ಮೇಲೆ  ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರು ಗುಂಡು ಹಾರಿಸಿ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯಸಭೆಯಲ್ಲಿ ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಸಿಟಿಜನ್ ಫೋರಮ್ ರಚನೆಯಾಗಿತ್ತು ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಇಮದುಲ್ ಹಕ್ ಹೇಳಿದ್ದಾರೆ. "ಇದು ರಾಜಕೀಯ-ವಿರೋಧಿ ವೇದಿಕೆಯಾಗಿದೆ. ತಿದ್ದುಪಡಿ ಮಾಡಿದ ಕಾಯ್ದೆಯನ್ನು ವಿರೋಧಿಸಿ ಬಂದ್ ಅನ್ನು ಕರೆಯಲಾಯಿತು ಮತ್ತು ನಾವು ಸ್ಥಳೀಯ ರಸ್ತೆಯನ್ನು ನಿರ್ಬಂದಿಸಿ ಧರಣಿ ನಡೆಸುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಎರಡು ವಾಹನಗಳು ತೀವ್ರಗತಿಯಲ್ಲಿ ಆಗಮಿಸಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ನಮ್ಮ ಮೇಲೆ ಗುಂಡು ಹಾರಿಸಿ ಬಾಂಬುಗಳನ್ನು ಎಸೆದರು." ಅವರು ಹೇಳಿದ್ದಾರೆ.

ಹೊಸದಾಗಿ ರೂಪುಗೊಂಡ ಈ ಫೋರಮ್ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಯನ್ನು ಆಯೋಜಿಸುತ್ತಿದೆ ಎಂದು ಆಡಳಿತ ಪಕ್ಷವು ಅರಿತಿದೆ.  "ಈ ಪ್ರದೇಶದ ತೃಣಮೂಲ ನಾಯಕರು ನಮ್ಮೊಂದಿಗೆ ಚಳವಳಿಗೆ ಸೇರಲು ಬಯಸಿದ್ದರು ಆದರೆ ನಮ್ಮ ವೇದಿಕೆ ರಾಜಕೀಯ-ವಿರೋಧಿಯಾದ ಕಾರಣ ನಾವು ಅವರನ್ನು ಸೇರಿಸಿಕೊಂಡಿಲ್ಲ. 

ತೃಣಮೂಲದ ಸ್ಥಳೀಯ ಬ್ಲಾಕ್ ಅಧ್ಯಕ್ಷರು ಈ ದಾಳಿಯನ್ನು ಮುನ್ನಡೆಸಿದರು ಮತ್ತು ರಸ್ತೆ ತಡೆ ಹಾಕಿದ ಸ್ಥಳವನ್ನು ತಲುಪಿದ ವಾಹನಗಳಲ್ಲಿ ಅವರಿದ್ದರು ಎಂದು ಆರೋಪಿಸಲಾಗಿದೆ. ಆದರೆ ತಮ್ಮ ಮೇಲಿನ ಆರೋಪವನ್ನು , ತಹಿರುದ್ದೀನ್ ಈ ಆರೋಪವನ್ನು ಅಲ್ಲಗಳದಿದ್ದಾರೆ "ಇದು ಸಿಪಿಎಂ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವಿನ ಘರ್ಷಣೆಯಾಗಿದೆ. ನಮ್ಮ ಬೆಂಬಲಿಗರು ಯಾರೂ ಇದರಲ್ಲಿ ಭಾಗಿಯಾಗಿಲ್ಲ." ಅವರು ಹೇಳಿದ್ದಾರೆ.

ಈ ನಡುವೆ "ಸಿಎಎ ವಿರುದ್ಧ ಜನರ ಆಂದೋಲನವನ್ನು ಹತ್ತಿಕ್ಕುವ ಬಿಜೆಪಿಯ ಯೋಜನೆಯನ್ನು ತೃಣಮೂಲ ಕಾಂಗ್ರೆಸ್ ಜಾರಿಗೊಳಿಸುತ್ತಿದೆ ಎಂದು ಈ ಘಟನೆ ಸಾಬೀತುಪಡಿಸಿತು ಎಂದು ಸಿಪಿಎಂ ಪೊಲಿಟ್‌ಬ್ಯುರೊ ಸದಸ್ಯ ಮೊಹಮ್ಮದ್ ಸೆಲೀಮ್  ಹೇಳಿದ್ದಾರೆ.

ಸಾವಿನ ಸುದ್ದಿ ಹರಡುತ್ತಿದ್ದಂತೆ, ಸಿಎಎ ವಿರೋಧಿ ಪ್ರತಿಭಟನಾಕಾರರು ಮೋಟಾರ್ ಬೈಕುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಪ್ರದೇಶದಲ್ಲಿ ತೃಣಮೂಲ ಬೆಂಬಲಿಗರ ಒಡೆತನದ ಮನೆಗಳನ್ನು ದೋಚಿದ್ದಾರೆ. ಇದೀಗ ಪರಿಸ್ಥಿತಿ ಹತೋಟಿಗೆ ತರಲು ಪೋಲೀಸ್ ಪಡೆ ಹರಸಾಹಸ ನಡೆಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT