ದೇಶ

ಪ್ರತಿಷ್ಠೆ ಬೇಡ, ಸಿಎಎ ಹಿಂಪಡೆಯಿರಿ ಮೋದಿಗೆ ಸಿಎಂ ಭೂಪೇಶ್ ಪತ್ರ

Srinivas Rao BV

ರಾಯ್‌ಪುರ: ದೇಶದ ಉದ್ದಗಲಕ್ಕೂ ಭಾರಿ ಸಂಚಲನ, ತಲ್ಲಣ ಮೂಡಿಸಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಿಂಪಡೆಯುವಂತೆ ಚತ್ತಿಸ್ ಗಡದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಪಡಿಸಿದ್ದಾರೆ. 

ಈ ಸಂಬಂಧ ಅವರು ಪತ್ರ ಬರೆದಿದ್ದು,ಈ ಕಾಯ್ದೆಯ ಪ್ರಸ್ತುತ ತಿದ್ದುಪಡಿಯು ಅಕ್ರಮ ವಲಸಿಗರ ವಿರುದ್ಧ ಧರ್ಮದ ಆಧಾರದ ಮೇಲೆ ತಾರತಮ್ಯ, ಅಸಮಾನತೆ ಉಂಟು ಮಾಡಲಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯ ಸಂವಿಧಾನದ ಆಶಯಕ್ಕೆ, ತತ್ವಗಳಿಗೆ ವಿರುದ್ಧವಾಗಿದೆ. 

ಈ ಕಾಯಿದೆಯು ಇತರೆ ನೆರೆಯ ದೇಶಗಳಾದ ಶ್ರೀಲಂಕಾ, ಮ್ಯಾನ್ಮಾ ರ್ ನೇಪಾಳ ಮತ್ತು ಭೂತಾನ್ ನಿಂದ ವಲಸೆ ಬಂದವರಿಗೆ ಪೌರತ್ವ ನೀಡುವ ಅವಕಾಶ ಒದಗಿಸಿಲ್ಲ ಎಂದೂ ಅವರು ಬೊಟ್ಟು ಮಾಡಿದ್ದಾರೆ. ಚತ್ತೀಸ್‌ಗಗಡ ಮೂಲತಃ ಮೂಲತಃ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳನ್ನು ಒಳಗೊಂಡಿದೆ, ಅವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಡವರು, ಅಶಿಕ್ಷಿತರು ಮತ್ತು ಆರ್ಥಿಕ ಸಂಪನ್ಮೂಲದ ಕೊರತೆಯಿಂದ ನೊಂದಿದ್ದಾರೆ ಬೆಂದಿದ್ದಾರೆ ಹೊಂದಿದ್ದಾರೆ ಮತ್ತು ಆದ್ದರಿಂದ ಈ ಕಾಯಿದೆಯ ಅಗತ್ಯವಿರುವ ಜನರಿಗೆ ಅವರ ಅಗತ್ಯ ಪೂರ್ಣಗೊಳಿಸಲು ಕಷ್ಟವಾಗಲಿದೆ ಎಂದು ಅವರು ವಿವರಿಸಿದ್ದಾರೆ.

SCROLL FOR NEXT