ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜಾರ್ಖಂಡ್‌ನ ಇಬ್ಬರಲ್ಲಿ ಕೊರೋನಾ ವೈರಸ್‌ ಶಂಕೆ

ಜಾರ್ಖಂಡ್‌ನಲ್ಲಿ ಇಬ್ಬರು ನಿವಾಸಿಗಳಲ್ಲಿ ಕೊರೊನಾ ವೈರಸ್‌ ಇರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಜಾರ್ಖಂಡ್‌ನ ಇಬ್ಬರಲ್ಲಿ ಕೊರೋನಾ ವೈರಸ್‌ ಶಂಕೆ
Srinivas Rao BV
Updated On : 1 Feb 2020, 12:29 am

ರಾಂಚಿ: ಜಾರ್ಖಂಡ್‌ನಲ್ಲಿ ಇಬ್ಬರು ನಿವಾಸಿಗಳಲ್ಲಿ ಕೊರೊನಾ ವೈರಸ್‌ ಇರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಪಿಎಚ್‌ಡಿ ಮಾಡಲು ಶಾಂಘೈಯಲ್ಲಿದ್ದ ದಂಪತಿ ಹಿಂದಿರುಗಿದ್ದರು. ಅವರಲ್ಲಿ ಸೋಂಕು ಇರುವ ಬಗ್ಗೆ ದೆಹಲಿ ವಿಮಾನ ನಿಲ್ದಾಣವು ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳನ್ನು ಎಚ್ಚರಿಸಿತ್ತು. ಅವರಿಬ್ಬರೂ ರಾಂಚಿಯ ಕಂಕೇ ಮತ್ತು ಬರ್ಜಾ ಎಂಬ ಪ್ರದೇಶಕ್ಕೆ ಸೇರಿದವರು ಎಂದು ತಿಳಿದುಬಂದಿದೆ. 

ರಾಂಚಿಗೆ ಆಗಮಿಸಿದ ನಂತರ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪುಣೆಗೆ ಪರೀಕ್ಷೆಗೆ  ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರವೇ ಅವರಲ್ಲಿ ಕೊರೊನಾವೈರಸ್ ಇದೆಯೇ ಅಥವಾ ಇಲ್ಲವೆ ಎಂಬುದು ದೃಢಪಡಲಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement