ದೇಶ

ಕೋವಿಡ್-19 ಚಿಕಿತ್ಸೆಗೆ ಫವಿಪಿರಾವೀರ್ ಬಳಕೆಗೆ ಸಿಸಿಎಸ್ ಟಿ ಪರಿಗಣನೆ

Srinivas Rao BV

ಬೆಂಗಳೂರು: ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಂ (ಸಿಸಿಎಸ್ ಟಿ) ಸಣ್ಣ ಪ್ರಮಾಣದ ಕೊರೋನಾ ಸೋಂಕು ಇರುವವರಿಗೆ ಫವಿಪಿರಾವೀರ್ ಔಷಧವನ್ನು ಬಳಕೆ ಮಾಡುವುದನ್ನು ಪರಿಗಣಿಸಿದೆ. "ಥೆರೆಪಿಕ್ ಸಮಿತಿಗೆ ಈ ಸಂಬಂಧ ಪತ್ರ ಬರೆದಿದ್ದೇವೆ, ಒಮ್ಮೆ ಅನುಮತಿ ದೊರೆತ ಬಳಿಕ ನಾವು ಈ ಔಷಧ ಬಳಕೆ ಮಾಡಲಿದ್ದೇವೆ ಎಂದು ಸಿಸಿಎಸ್ ಟಿಯ ವಿಶೇಷ ಅಧಿಕಾರಿ ಡಾ. ತ್ರಿಲೋಕ್ ಚಂದ್ರ ಮಾಹಿತಿ ನೀಡಿದ್ದಾರೆ.

ಭಾರತದ ಗ್ಲೆನ್ಮಾರ್ಕ್ ಫಾರ್ಮಸಿಟಿಕಲ್ಸ್ ಫ್ಯಾಬಿಫ್ಲೂ ಎಂಬ ಹೆಸರಿನಲ್ಲಿ ಫವಿಪಿರಾವೀರ್ ಔಷಧವನ್ನು ತಯಾರಿಸುತ್ತಿದೆ. ಲಘು ಹಾಗೂ ಮಧ್ಯಮ ಪ್ರಮಾಣದ ಕೊವಿಡ್ 19 ಸೋಂಕಿತರಿಗೂ ಇದನ್ನು ಬಳಸಬಹುದಾಗಿದೆ. ಬಾಯಿ ಮೂಲಕ ಸೇವಿಸಬಹುದಾದ ಈ antiviral ಡ್ರಗ್ ಫ್ಯಾಬಿಫ್ಲೂ (FabiFlu) ವಿಶೇಷತೆಯಂದರೆ ಇಲ್ಲಿ ತನಕ ಈ ಡ್ರಗ್ ಬಳಸಿದವರಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. 

ಸಂಸ್ಥೆ ಹೇಳಿಕೊಂಡಿರುವಂತೆ 103ರೂಗಳಿಗೆ 1 ಫ್ಯಾಬಿಫ್ಲೂ ಮಾತ್ರೆ ಲಭ್ಯವಾಗಲಿದ್ದು, ದಿನವೊಂದಕ್ಕೆ 1800 ಎಂಜಿ ಮಾತ್ರೆ ಸೇವಿಸಬೇಕು. ಅಥವಾ ಪ್ರತಿದಿನ 800 ಎಂಜಿಯ 2 ಮಾತ್ರೆಗಳನ್ನು ಪ್ರತೀ ನಿತ್ಯ ಸತತ 14 ದಿನಗಳ ಕಾಲ ಸೇವಿಸಬೇಕು. ಅಂತೆಯೇ ಈ ಫ್ಯಾಬಿ ಫ್ಲೂ ಮಾತ್ರೆಯನ್ನು ಶ್ವಾಸಕೋಶದ ತೊಂದರೆ, ಸಕ್ಕರೆ ಖಾಯಿಲೆ ಇರುವ ಸೋಂಕಿತರೂ ಕೂಡ ತೆಗೆದುಕೊಳ್ಳಬಹುದು. ಆದರೆ ಗರ್ಭಿಣಿ, ಬಾಣಂತಿ, ಕರುಳುಬೇನೆಯುಳ್ಳವರು, ಯೂರಿಕ್ ಆಮ್ಲ ಅಸಮತೋಲನವುಳ್ಳವರು ತೆಗೆದುಕೊಳ್ಳುವಂತಿಲ್ಲ.  ಮಾತ್ರೆ ದೇಹದಲ್ಲಿನ ವೈರಾಣು ಪ್ರಮಾಣವನ್ನು ತಗ್ಗಿಸಲಿದ್ದು, ಕೇವಲ 4 ದಿನದಲ್ಲೇ ಇದರ ಪರಿಣಾಮ ಗೋಚರಿಸಲಿದೆ. 

SCROLL FOR NEXT