ದೇಶ

ಚೀನಾದ ಬ್ಯುಬೋನಿಕ್ ಪ್ಲೇಗ್ ಪರಿಸ್ಥಿತಿ ಗಮನಿಸುತ್ತಿದ್ದೇವೆ: ಡಬ್ಲ್ಯೂಹೆಚ್ಒ

Srinivas Rao BV

ಬೀಜಿಂಗ್ ನ ಅಧಿಕಾರಿಗಳು ಮಾಹಿತಿ ನೀಡಿದ ಬೆನ್ನಲ್ಲೇ ಚೀನಾದಲ್ಲಿ ಎದುರಾಗಿರುವ ಬ್ಯುಬೋನಿಕ್ ಪ್ಲೇಗ್ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ತಿಳಿಸಿದೆ.

ಚೀನಾದ ಉತ್ತರ ಒಳ ಮಂಗೋಲಿಯಾ ಪ್ರದೇಶದಲ್ಲಿ ದನಗಾಹಿಯೊಬ್ಬನಿಗೆ ಬ್ಯುಬೋನಿಕ್ ಪ್ಲೇಗ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಖೋವ್ದ್ ಪ್ರಾಂತ್ಯದಲ್ಲಿ ಮಾರ್ಮೊಟ್ ಮಾಂಸ ಸೇವನೆ ಮಾಡಿದ್ದ ಇಬ್ಬರು ಸಹೋದರರಿಗೆ ಕಳೆದ ವಾರ ಬ್ಯುಬೋನಿಕ್ ಪ್ಲೇಗ್ ದೃಢಪಟ್ಟಿದೆ.

ಬ್ಯುಬೋನಿಕ್ ಪ್ಲೇಗ್ ನಮ್ಮ ನಡುವೆ ಇದೆ, ಶತಮಾನಗಳ ಕಾಲ ನಮ್ಮ ನಡುವೆ ಇತ್ತು ಎಂದು ಡಬ್ಲ್ಯೂ ಹೆಚ್ ಒ ವಕ್ತಾರ ಮಾರ್ಗರೇಟ್ ಹ್ಯಾರಿಸ್ ಹೇಳಿದ್ದಾರೆ. ಚೀನಾದಲ್ಲಿ ಕಾಣಿಸಿಕೊಂಡಿರುವ ಪ್ಲೇಗ್ ಪ್ರಕರಣಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ. ಅದನ್ನು ನಾವು ಹೆಚ್ಚಿನ ರಿಸ್ಕ್ ಎಂದು ಹೇಳುವುದಿಲ್ಲ, ಆದರೆ ಜಾಗರೂಕತೆಯಿಂದ ಗಮನಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದು ಚೀನಾ ಹಾಗೂ ಮಂಗೋಲಿಯನ್ ಅಧಿಕಾರಿಗಳ ಜೊತೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದೆ.

SCROLL FOR NEXT