ದೇಶ

ಗಡಿ ವಿವಾದ ಸೂಕ್ಷ್ಮ, ಸಂಕೀರ್ಣವಾದದ್ದು- ಚೀನಾ ರಾಯಭಾರಿ

Nagaraja AB

ನವದೆಹಲಿ:  ಗಡಿ ವಿವಾದ ಸೂಕ್ಷ್ಮ ಹಾಗೂ ಸಂಕೀರ್ಣವಾಗಿದ್ದು, ಪರಸ್ಪರ ಮಾತುಕತೆ ಹಾಗೂ ಸಮಾಲೋಚನೆ ಮೂಲಕ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ  ಸನ್ ವೀಡಾಂಗ್ ಹೇಳಿದ್ದಾರೆ.

ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ಬಗೆಹರಿಸಿಕೊಂಡು  ಭಾರತ ಹಾಗೂ ಚೀನಾ ನಡುವಣ ಸಂಬಂಧಗಳು ಸರಿಯಾದ ಹಾದಿಗೆ ಬರಬೇಕು ಎಂಬ ಶೀರ್ಷಿಕೆಯಲ್ಲಿ ಚೀನಾ ರಾಯಬಾರಿ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿರುವ ಸನ್ ವೀಡಾಂಗ್,  ಉಭಯ ರಾಷ್ಟ್ರಗಳ ನಡುವಣ ಸಂಬಂಧದಲ್ಲಿ ಅಡೆತಡೆ ಬಗ್ಗೆ ಮಾತನಾಡಿದ್ದು,  ಐದು  ಹಂತಗಳಲ್ಲಿ ಕೆಲ ಮೂಲಭೂತ ಅಂಶಗಳನ್ನು ಸ್ಪಷ್ಟೀಕರಿಸಿದ್ದಾರೆ.

ಚೀನಾ ಮತ್ತು ಭಾರತಕ್ಕೆ ಮುಖಾಮುಖಿಯಾಗುವದಕ್ಕಿಂತಲೂ ಶಾಂತಿ ಬೇಕಾಗಿದೆ. ಶೂನ್ಯ ಮೊತ್ತದ ಆಟಕ್ಕಿಂತಲೂ ಗೆಲುವಿನ ಸಹಕಾರ ಬೇಕಾಗಿದೆ.ನಂಬಿಕೆಯನ್ನು ಬೆಳೆಸಬೇಕಾಗಿದೆ. ಸಂಬಂಧಗಳು ಹಿಂದೆ ಆಗುವ ಬದಲು ಮುಂದುವರೆಯಬೇಕು ಎಂದು ಅವರು ಹೇಳಿದ್ದಾರೆ.

ಶಾಂತಿ ಮತ್ತು ಸಂಯಮದಿಂದ ಭಾರತ ಹಾಗೂ ಚೀನಾ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಸನ್ ವೀಡಾಂಗ್ ತಿಳಿಸಿದ್ದಾರೆ.

SCROLL FOR NEXT