ದೇಶ

ಗರ್ಭಿಣಿ ಆನೆ ದುರಂತ ಸಾವು: ಕೇಂದ್ರ, ಕೇರಳ ಸೇರಿ 13 ರಾಜ್ಯಗಳ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

Raghavendra Adiga

ನವದೆಹಲಿ: ಕಾಡು ಪ್ರಾಣಿಗಳನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಸಂವಿಧಾನದ 14 ಮತ್ತು 21 ನೇ ವಿಧಿಯನ್ನು ಉಲ್ಲಂಘಿಸಿ ಬೆದರಿಸುವುದು,  ಹತ್ಯೆ ಮಾಡುವುದು, ಅನಾಗರಿಕ ಪದ್ಧತಿಗಳನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಕೇಂದ್ರ, ಕೇರಳ ಮತ್ತು ಇತರ 13 ರಾಜ್ಯಗಳಿಂದ  ಪ್ರತಿಕ್ರಿಯೆ ಕೋರಿದೆ.

ವಕೀಲರು ಸಲ್ಲಿಸಿದ ಮನವಿಯು ಅಂತಹ ಘಟನೆಗಳನ್ನು ನಿಭಾಯಿಸಲು ನಿಗದಿತ  ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಗಳನ್ನು  ರಚಿಸಲು ಮತ್ತು ದೇಶಾದ್ಯಂತ ಅರಣ್ಯ ಇಲಾಖೆಯಲ್ಲಿನ  ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮಾರ್ಗಸೂಚಿಗಳನ್ನು ರಚಿಸಲು ಸೂಚಿಸುವಂತೆ ಅರ್ಜಿಯಲ್ಲಿ ಕೋರಿದೆ. ಈ ಸಂಬಂಧ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ  ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಆರ್ ಸುಭಾಷ್ ರೆಡ್ಡಿ ಮತ್ತು ಎ ಎಸ್ ಬೋಪಣ್ಣ ಅವರ ನ್ಯಾಯಪೀಠ ಕೇಂದ್ರ ಮತ್ತು ಕೇರಳ ಸೇರಿದಂತೆ 13 ರಾಜ್ಯಗಳಿಗೆ ನೋಟಿಸ್ ನೀಡಿ ಅವರ ಪ್ರತಿಕ್ರಿಯೆ ಕೋರಿದೆ.

ಕಾಡು ಪ್ರಾಣಿಗಳನ್ನು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಸಂವಿಧಾನದ 14 ಮತ್ತು 21 ನೇ ವಿಧಿಗಳ ಉಲ್ಲಂಘನೆಯಾಗುವಂತೆ  ತಡೆಯಲು ಅನಾಗರಿಕ ವಿಧಾನಗಳು / ಬಲೆಗಳು / ದಪ್ಪದ ಕ್ಳು, ದೊಣ್ಣೆಗಳು / ಸ್ಫೋಟಕಗಳನ್ನು ಬಳಸಿ ಬೆದರಿಸುವ , ಕೊಲ್ಲುವ ಅಭ್ಯಾಸವನ್ನು ನಿಷೇಧಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿದಾರ ಸುಭಾಮ್ ಅವಸ್ಥಿ  ತಮ್ಮ ಮನವಿಯಲ್ಲಿ ಕೇರಳದ ಘಟನೆಯನ್ನು ಉಲ್ಲೇಖಿಸಿದ್ದಾರೆ, ಇತ್ತೀಚೆಗೆ ಗರ್ಭಿಣಿ ಆನೆ ಪಟಾಕಿ ತುಂಬಿದ ಅನಾನಸ್ ತಿಂದ ನಂತರ ಸಾವನ್ನಪ್ಪಿದ್ದು ಇದಲ್ಲದೆ ಕೇರಳ,  ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್ ಘರ್ಜಾರ್ಖಂಡ್, ಕರ್ನಾಟಕ, ಮೇಘಾಲಯ, ನಾಗಾಲ್ಯಾಂಡ್, ಒಡಿಶಾ, ತಮಿಳುನಾಡು, ತ್ರಿಪುರ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿವೆ. ಕಾಡು ಪ್ರಾಣಿಗಳನ್ನು ಬೆದರಿಸಲು  ಬಲೆಗಳನ್ನು ಬಳಸುವ ಅಭ್ಯಾಸ ಇದೆ. ಕೇರಳದಲ್ಲಿ ನಡೆದ ಘಟನೆ ಮತ್ತು ಅದರಂತಹ ನೂರಾರು ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಇಂತಹಾ ಘಟನೆಗಳು ಬೆಳಕಿಗೆ ಬಂದಿದೆ. ಎಂದು ಅವಸ್ಥಿ ಹೇಳಿದರು. 

SCROLL FOR NEXT