ಸೆಲ್ಲೂರು ರಾಜು 
ದೇಶ

ತಮಿಳುನಾಡು ಸಚಿವ ಸೆಲ್ಲೂರು ಕೆ.ರಾಜು ಗೆ ಕೊರೋನಾ ಪಾಸಿಟಿವ್!

ತಮಿಳುನಾಡು ಸಹಕಾರ ಸಚಿವ ಸೆಲ್ಲೂರು ಕೆ. ರಾಜು ಅವರ ಕೊರೊನಾ ವರದಿ ಪಾಸಿಟಿವ್‌ ಬಂದಿದೆ. ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಚೆನ್ನೈ: ತಮಿಳುನಾಡು ಸಹಕಾರ ಸಚಿವ ಸೆಲ್ಲೂರು ಕೆ. ರಾಜು ಅವರ ಕೊರೊನಾ ವರದಿ ಪಾಸಿಟಿವ್‌ ಬಂದಿದೆ. ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ತಮಿಳುನಾಡಿನಲ್ಲಿ ಶುಕ್ರವಾರ 3,680 ಹೊಸ ಪ್ರಕರಣಗಳು ದಾಖಲಾಗಿವೆ. ಚೆನ್ನೈನಲ್ಲಿ 1,205 ಕೇಸ್ ಪತ್ತೆಯಾಗಿದ್ದು 27 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆತಮಿಳುನಾಡಿನಲ್ಲಿ ಒಟ್ಟು 3 ಸಚಿವರಿಗೆ ಕೋವಿಡ್‌ ತಗುಲಿದಂತಾಗಿದೆ.

ಈ ಹಿಂದೆ ಇಂಧನ ಸಚಿವ ಪಿ. ತಂಗಮಣಿ ಮತ್ತು ಉನ್ನತ ಶಿಕ್ಷಣ ಸಚಿವ ಕೆ.ಪಿ. ಅನ್ಬಳಗನ್‌ ಕೊರೊನಾ ಸೋಂಕಿತರಾಗಿದ್ದರು. ಇವರನ್ನು ಹೊರತುಪಡಿಸಿ ಇಲ್ಲಿಯವರೆ ಒಟ್ಟು 8 ಶಾಸಕರಿಗೂ ಕೊರೊನಾ ಸೋಂಕು ತಗುಲಿದೆ.

ಇನ್ನು ಡಿಎಂಕೆ ಶಾಸಕರಾದ ಕೆ.ಎಸ್‌. ಮಸ್ತಾನ್‌, ಆರ್‌ಟಿ ಅರಸು, ವಾಸನಾಥಮ್‌ ಕೆ ಕಾರ್ತಿಕೇಯನ್‌, ಜೆ ಅನ್ಬಳಗನ್‌ ಅವರ ಕೊರೊನಾ ವರದಿಯೂ ಪಾಸಿಟಿವ್‌ ಬಂದಿತ್ತು. ಇದರಲ್ಲಿ ಅನ್ಬಳಗನ್‌ ಕಳೆದ ತಿಂಗಳು ಸೋಂಕಿನಿಂದ ಸಾವನ್ನಪ್ಪಿದ್ದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

ಇರಾನ್ ಜೊತೆಗೆ ನಾಳೆ ಮಹತ್ವದ ಮಾತುಕತೆ: ಇಸ್ಲಾಮಾಬಾದ್‌ಗೆ ತೆರಳುವ ಮುನ್ನಾ ಜೆಡಿ ವ್ಯಾನ್ಸ್ ನೀಡಿದ ವಾರ್ನಿಂಗ್ ಏನು!

Viral Video: ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಬೆನ್ನಲ್ಲೇ 165 ಲೀಟರ್ ತುಪ್ಪ ಅರ್ಪಣೆ; ನೆಟ್ಟಿಗರಿಂದ ಭಾರೀ ಆಕ್ರೋಶ

ISI, ತೆಹ್ರೀಕ್-ಇ- ತಾಲಿಬಾನ್ ಹಿಂದೂಸ್ತಾನ್ ಜೊತೆಗೆ ನಂಟು: ಡೆಹ್ರಾಡೂನ್ ವ್ಯಕ್ತಿಯ ಬಂಧನ!

ದಾವಣಗೆರೆ: 'ಸಮರ್ಥ್ ಸೋಲಿಸಲು ಕಾಂಗ್ರೆಸ್ ನಿಂದಲೇ ಸಂಚು'; ಮುಸ್ಲಿಂ ನಾಯಕರಿಂದ ಸ್ಫೋಟಕ ಹೇಳಿಕೆ

SCROLL FOR NEXT