ದೇಶ

ಆಗಸ್ಟ್ 1ರೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡುತ್ತೇನೆ: ಪ್ರಿಯಾಂಕಾ ಗಾಂಧಿ ವಾದ್ರಾ

Manjula VN

ನವದೆಹಲಿ: ಆಗಸ್ಟ್ 1 ರೊಳದೆ ಲೋಧಿ ಎಸ್ಟೇಟ್ ಬಂಗಲೆಯನ್ನು ಖಾಲಿ ಮಾಡುತ್ತೇನೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ಹೇಳಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ, ಜುಲೈ 1 ರಂದು ಬಂಗಲೆ ಖಾಲಿ ಮಾಡುವಂತೆ ಪತ್ರ ಬಂದಿದ್ದು, ನಾನು ಸರ್ಕಾರಕ್ಕೆ ಯಾವುದೇ ರೀತಿಯ ಮನವಿಯನ್ನೂ ಮಾಡಿಕೊಂಡಿಲ್ಲ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಸುದ್ದಿಗಳಾಗಿವೆ. ಆಗಸ್ಟ್ 1 ರೊಳಗೆ ನಾನು ಲೋಧಿ ಎಸ್ಟೇಟ್'ನ್ನು ಖಾಲಿ ಮಾಡುತ್ತಿದ್ದೇನೆಂದು ಸ್ಪಷ್ಟಪಡಿಸಿದ್ದಾರೆ. 

ಎಸ್ಪಿಜಿ ಭದ್ರತೆ ಪಡೆದಿದ್ದ ಪ್ರಿಯಾಂಕಾ ವಾದ್ರಾ ಅವರಿಗೆ 1997ರ ಏ.21ರಂದು ಲೋಧಿ ಎಸ್ಟೇಟ್ ನಿವಾಸವನ್ನು ಸರ್ಕಾರ ಮಂಜೂರು ಮಾಡಿತ್ತು. ಬಳಿಕ ಎಸ್'ಪಿಜಿ ಭದ್ರತೆ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಆ.1ರ ಒಳಗಾಗಿ ಮನೆ ಬಂಗಲೆ ತೆರವುಗೊಳಿಸುವಂತೆ ನೋಟಿಸ್ ನೀಡಿಲಾಗಿತ್ತು. 

SCROLL FOR NEXT