ದೇಶ

ಬಿಜೆಪಿ ಆತಿಥ್ಯ ತಿರಸ್ಕರಿಸಿ, ಮರಳಿ ಕಾಂಗ್ರೆಸ್ ಕುಟುಂಬ ಸೇರಿ: ಸಚಿನ್ ಪೈಲಟ್ ಗೆ ಸುರ್ಜೇವಾಲಾ

Lingaraj Badiger

ಜೈಪುರ್: ಬಂಡಾಯ ನಾಯಕ ಸಚಿನ್ ಪೈಲಟ್ ಅವರು ಬಿಜೆಪಿ ಸೇರುತ್ತಿಲ್ಲ ಎನ್ನುವುದಾದರೆ ಕೇಸರಿ ಪಕ್ಷದ ಆತಿಥ್ಯ ಸ್ವೀಕರಿಸುವುದನ್ನು ಬಿಟ್ಟು ಮರಳಿ ಪಕ್ಷಕ್ಕೆ ಬರಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲಾ ಅವರು ಬುಧವಾರ ಹೇಳಿದ್ದಾರೆ.

ಸಚಿನ್ ಪೈಲಟ್ ಅವರು ತಾನು ಬಿಜೆಪಿ ಸೇರುತ್ತಿಲ್ಲ ಎಂದು ಹೇಳಿಕೆ ನೀಡಿರುವುದನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ನೀವು ಬಿಜೆಪಿ ಹೋಗಲು ಬಯಸುವುದಿಲ್ಲ ಎನ್ನುವುದಾದರೆ. ಆ ಪಕ್ಷದ ಆತಿಥ್ಯ ತಿರಸ್ಕರಿಸಿ ಮರಳಿ ಕಾಂಗ್ರೆಸ್ ಕುಟುಂಬಕ್ಕೆ ಬನ್ನಿ ಎಂದು ಸುರ್ಜೇವಾಲಾ ಅವರು ಮನವಿ ಮಾಡಿದ್ದಾರೆ.

ಪೈಲಟ್ ಅವರು ಮೊದಲು ಐಷಾರಾಮಿ ಹೋಟೆಲ್ ನಲ್ಲಿ ಹರಿಯಾಣ ಪೊಲೀಸರ ಭದ್ರತೆಯಲ್ಲಿರುವ ಕಾಂಗ್ರೆಸ್ ಶಾಸಕರನ್ನು ಬಿಟ್ಟು ಕಳುಹಿಸಲಿ ಎಂದು ಸುರ್ಜೇವಾಲಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ನಮ್ಮ ಪಕ್ಷದ ನಾಯಕರು ಸಚಿನ್ ಪೈಲಟ್ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೂ ಅವರು ಮತ್ತು ಅವರ ಬೆಂಬಲಿತ ಕೆಲವು ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಗೈರು ಆದರು ಎಂದು ಸುರ್ಜೇವಾಲಾ ಅವರು ಹೇಳಿದ್ದಾರೆ.

ಸದ್ಯ ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿತ ಕಾಂಗ್ರೆಸ್ ಶಾಸಕರು ಬಿಜೆಪಿ ಆಡಳಿತವಿರುವ ಹರಿಯಾಣದ ಗುರುಗ್ರಾಮದ ಐಷಾರಾಮಿ ಹೋಟೆಲ್ ವೊಂದರಲ್ಲಿ ತಂಗಿದ್ದಾರೆ.

SCROLL FOR NEXT