ದೇಶ

ಮೊದಲ ಬಾರಿ ಕೊರೋನಾ ಸಮುದಾಯಕ್ಕೆ ಹರಡಿದೆ ಎಂದು ಖಚಿತಪಡಿಸಿದ ಕೇರಳ ಸಿಎಂ

Lingaraj Badiger

ತಿರುವನಂತಪುರಂ: ಇದೇ ಮೊದಲ ಬಾರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ತಿರುವನಂತಪುರಂನಲ್ಲಿ ಮಹಾಮಾರಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡಿದೆ ಎಂದು ಶುಕ್ರವಾರ ಖಚಿತಪಡಿಸಿದ್ದಾರೆ.

ತಿರುವನಂತಪುರಂನ ಪುಲ್ಲುವಿಲಾ ಮತ್ತು ಪೂಂಟುರಾ ಎಂಬ ಗ್ರಾಮಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಎರಡು ಗ್ರಾಮಗಳಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಸಿಎಂ ಹೇಳಿದ್ದಾರೆ.

ಕೇರಳದಲ್ಲಿ ಇಂದು ಒಂದೇ ದಿನ 791 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ದೇವರ ನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 11,066ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ 791 ಪ್ರಕರಣಗಳ ಪೈಕಿ 532 ಮಂದಿಗೆ ಸ್ಥಳೀಯರಿಂದಲೇ ಸೋಂಕು ತಗುಲಿದ್ದು, 42 ಮಂದಿ ಸೋಂಕು ಹೇಗೆ ತಗುಲಿತು ಎಂಬು ಪತ್ತೆಯಾಗಿಲ್ಲ ಎಂದು ಸಿಎಂ ಮಾಧ್ಯಮಕ್ಕೆ ತಿಳಿಸಿದ್ದಾರೆ.

SCROLL FOR NEXT