ದೇಶ

ನೆರವಿಗೆ ಬಂದ ಮಾಜಿ ಶಾಸಕ ಜಿತೇಂದ್ರ ಸಿಂಗ್ ಶುಂಟಿ: ಕೊರೋನಾದಿಂದ ಸತ್ತ 45 ಶವಗಳ ಅಂತ್ಯಸಂಸ್ಕಾರ

Shilpa D

ನವದೆಹಲಿ: ಕೊರೋನಾದಿಂದ ಸತ್ತ ಕುಟುಂಬಸ್ಥರ ಪ್ರೀತಿ ಪಾತ್ರರ ಅಂತ್ಯ ಸಂಸ್ಕಾರ ನಡೆಸುವುದು ಕಷ್ಟದ ಕೆಲಸವಾಗಿದೆ, ಹೀಗಾಗಿ ಶಹದಾರಾ ಕ್ಷೇತ್ರದ ಮಾಜಿ ಶಾಸಕ ಜಿತೇಂದ್ರ ಸಿಂಗ್ ಶುಂಟಿ ಕೊರೋನಾದಿಂದ ಸತ್ತವರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಲು ಮುಂದಾಗಿದ್ದಾರೆ.

ಮಾಜಿ ಶಾಸಕರ ಸ್ವತಂತ್ರ ಸಂಸ್ಥೆಯಾಗಿರುವ ಶಹೀದ್ ಭಗತ್ ಸಿಂಗ್ ಸೇವಾ ದಳ (ಎಸ್‌ಬಿಎಸ್‌ಎಸ್‌ಡಿ) ಕಳೆದ ಮೂರು ತಿಂಗಳಲ್ಲಿ ಕೊರೋನಾ ದಿಂದ ಸಾವನ್ನಪ್ಪಿದ 45 ಶವಗಳ ಸಂಸ್ಕಾರ  ನಡೆಸಿದ್ದಾರೆ ಅದರಲ್ಲಿ  ಶವಗಳ ಗುರುತು ಪರಿಚಯ ಇರಲಿಲ್ಲ.

ಎಸ್ ಬಿಎಸ್ ಎಸ್ ಡಿ ಸಂಸ್ಥಾಪಕ 58 ವರ್ಷದ ಶುಂಠಿ ಮತ್ತು ಅವರ ಸಂಘಟನೆಯ 22 ಸ್ವಯಂ ಸೇವಕರು, 18 ವ್ಯಾನ್ ಗಳಲ್ಲಿ ಕೊರೋನಾದಿಂದ ಸತ್ತ 261 ಶವಗಳನ್ನು ಸಾಗಿಸಿದ್ದಾರೆ, ಜೊತಗೆ 250 ಕೊರೊನಾ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮಾಜಿ ಶಾಸಕ ಶುಂಟಿ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಜೊತೆಗೆ ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಕೂಡ ಕೊರೋನಾ ಸೋಂಕು ತಗುಲಿತ್ತು.

ಕೊರೋನಾದಿಂದ ಸಾವನ್ನಪ್ಪಿದ 35 ಶವಗಳ ಅಂತ್ಯಸಂಸ್ಕಾರ ನೆರವೇರಿಸಿ ಅವರ ಕುಟುಂಬಕ್ಕೆ ಸಹಾಯಮಾಡಿದ್ದಾಗಿ ಶುಂಟಿ ತಿಳಿಸಿದ್ದಾರೆ. ಕ್ವಾರಂಟೈನ್ ನಲ್ಲಿರುವ ಅವರ ಕುಟುಂಬಸ್ಥರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳಲು ಸಾಧ್ಯವಾಗುವುದಿಲ್ಲ, ಕೆಲವರು ಶವ ತೆಗೆದುಕೊಳ್ಳಲು ಭಯ ಪಡುತ್ತಾರೆ, ಹೀಗಾಗಿ ಅವರ ನಂಬಿಕೆಗೆ ಅನುಗುಣವಾಗಿ ನಾವು ಅಂತ್ಯ ಸಂಸ್ಕಾರ ನೆರೆವೇರಿಸುತ್ತೇವೆ ಎಂದು ಹೇಳಿದ್ದಾರೆ. ತಮ್ಮ ಸಂಘಟನೆ ಮೂರು ಜಿಲ್ಲೆಗಳಲ್ಲಿ ಸಕ್ರಿವಾಗಿದೆ, ಶುಂಟಿ ಅವರ ಸಂಘಟನೆಯ ಕೆಲಸಕ್ಕಾಗಿ ಸರ್ಕಾರಿ ಅಧಿಕಾರಿಗಳು ಅವರನ್ನು ಹೊಗಳಿದ್ದಾರೆ.

SCROLL FOR NEXT