ದೇಶ

ಅಪ್ರಚೋದಿತ ಗುಂಡಿನ ದಾಳಿಗೆ ನಾಗರಿಕರ ಸಾವು: ಭಾರತದಲ್ಲಿನ ಪಾಕ್‍ ರಾಯಭಾರಿಗೆ ಸಮನ್ಸ್ 

Vishwanath S

ನವದೆಹಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಜಮ್ಮು- ಕಾಶ್ಮೀರದ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಶುಕ್ರವಾರ ಪಾಕ್‍ ಭದ್ರತಾ ಪಡೆಗಳ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯಿಂದ ಮೂವರು ಅಮಾಯಕ ನಾಗರಿಕರು ಹತ್ಯೆಯಾಗಿರುವುದರ ವಿರುದ್ಧ ಭಾರತ ಶನಿವಾರ ಪಾಕಿಸ್ತಾನ ರಾಯಭಾರಿಯನ್ನು ಕರೆಸಿಕೊಂಡು ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ.

ಶುಕ್ರವಾರ ಪಾಕ್‍ ಪಡೆಗಳ ದಾಳಿಯಿಂದ ಮೃತಪಟ್ಟ ನಾಗರಿಕರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಪಾಕಿಸ್ತಾನ ಪಡೆಗಳು ಅಮಾಯಕ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ಭಾರತ ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT