ರಾಹುಲ್ ಗಾಂಧಿ ಎಂದಿನಂತೆ ಸತ್ಯಾಂಶಗಳಲ್ಲಿ ದುರ್ಬಲ, ಕೆಸರೆರಚಾಟದಲ್ಲಿ ಬಲಿಷ್ಠ: ಬಿಜೆಪಿ ಟೀಕೆ
ಭಾರತ-ಚೀನಾ ಗಡಿ ಬಿಕ್ಕಟ್ಟು ಕುರಿತಂತೆ ಪ್ರಧಾನಿ ನರೇಂದ್ರಮೋದಿ ವಿರುದ್ಧ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ‘ಎಐಸಿಸಿ ಮಾಜಿ ಅಧ್ಯಕ್ಷರು ಎಂದಿನಂತೆ ಸತ್ಯಾಂಶಗಳಲ್ಲಿ ದುರ್ಬಲರಾಗಿದ್ದು, ಕೆಸರೆರಚಾಟದಲ್ಲಿ ಬಲಶಾಲಿಯಾಗಿದ್ದಾರೆ ಎಂದು ಟೀಕಿಸಿದೆ.
ನವದೆಹಲಿ: ಭಾರತ-ಚೀನಾ ಗಡಿ ಬಿಕ್ಕಟ್ಟು ಕುರಿತಂತೆ ಪ್ರಧಾನಿ ನರೇಂದ್ರಮೋದಿ ವಿರುದ್ಧ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ‘ಎಐಸಿಸಿ ಮಾಜಿ ಅಧ್ಯಕ್ಷರು ಎಂದಿನಂತೆ ಸತ್ಯಾಂಶಗಳಲ್ಲಿ ದುರ್ಬಲರಾಗಿದ್ದು, ಕೆಸರೆರಚಾಟದಲ್ಲಿ ಬಲಶಾಲಿಯಾಗಿದ್ದಾರೆ ಎಂದು ಟೀಕಿಸಿದೆ.
‘ರಾಹುಲ್ ಗಾಂಧಿ ಜೀ ಎಂದಿನಂತೆ ಸತ್ಯಗಳಲ್ಲಿ ದುರ್ಬಲರಾಗಿದ್ದಾರೆ. ಆದರೆ, ಕೆಸರೆರಚಾಟದಲ್ಲಿ ಬಲಿಷ್ಠರಾಗಿದ್ದಾರೆ.’ ಸರಣಿ ಟ್ವೀಟ್‌ಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದ್ದಾರೆ.
1962 ರ ಹಿಂದಿನ ಪಾಪಗಳನ್ನು ತೊಳೆದು ಕೊಳ್ಳಲು ಮತ್ತು ದೇಶವನ್ನು ದುರ್ಬಲಗೊಳಿಸಲು ರಕ್ಷಣಾ ಮತ್ತು ವಿದೇಶಾಂಗ ನೀತಿ ವಿಷಯಗಳನ್ನು ರಾಜಕೀಯಗೊಳಿಸುವ ಪ್ರಯತ್ನಗಳು ವಂಶ ಪಾರಂಪರ್ಯವೊಂದರ ಹತಾಶೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿಯವರು ಒಬ್ಬ ಬಲಶಾಲಿ ನಾಯಕ ಎಂದು ನಕಲಿ ವ್ಯಕ್ತಿತ್ವವನ್ನು ಕಲ್ಪಿಸಿ ಅಧಿಕಾರಕ್ಕೆ ಬಂದರು, ತಾವು 56 ಇಂಚು ಎದೆಯ ಪ್ರಧಾನಿ ಎಂಬ ಅವರ ಹೇಳಿಕೆಯನ್ನು ಅವರು ಇಂದು ಉಳಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ, ಅವರ ವ್ಯಕ್ತಿತ್ವ, ಮಾತುಗಳು ಈಗ ಭಾರತಕ್ಕೆ ದೊಡ್ಡ ದೌರ್ಬಲ್ಯವಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.