ನ್ಯಾಯಮೂರ್ತಿ ಚಂದ್ರಚೂಡ್ (ಸಂಗ್ರಹ ಚಿತ್ರ) 
ದೇಶ

ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ 18 ಲಕ್ಷ ಅರ್ಜಿಗಳು ದಾಖಲು: ನ್ಯಾಯಮೂರ್ತಿ ಚಂದ್ರಚೂಡ್

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಹೇರಲಾಗಿದ್ದ ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಸುಮಾರು 18 ಲಕ್ಷ ಅರ್ಜಿಗಳು ಕೋರ್ಟ್ ಗಳಲ್ಲಿ ದಾಖಲಾಗಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಮುಂಬೈ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಹೇರಲಾಗಿದ್ದ ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಸುಮಾರು 18 ಲಕ್ಷ ಅರ್ಜಿಗಳು ಕೋರ್ಟ್ ಗಳಲ್ಲಿ ದಾಖಲಾಗಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಶನಿವಾರ ನಾಸಿಕ್ ನಲ್ಲಿ ಮೊದಲ ಇ-ಗವರ್ನೆನ್ಸ್ ಕೇಂದ್ರದ ವರ್ಚುವಲ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಾಕ್ ಡೌನ್ ಹೇರಲಾಗಿದ್ದ ಮಾರ್ಚ್ ನಿಂದ ಜುಲೈ ವರೆಗೂ ದೇಶಾದ್ಯಂತ ವಿವಿಧ ಕೋರ್ಟ್ ಗಳಲ್ಲಿ ಸುಮಾರು 18 ಲಕ್ಷ ಅರ್ಜಿಗಳು ದಾಖಲಾಗಿವೆ. ಮಾರ್ಚ್ 24ರಿಂದ ಜುಲೈ 24ರವೆರೆಗೂ ದೇಶಾದ್ಯಂತ 18,03,327 ಅರ್ಜಿಗಳು ದಾಖಲಾಗಿವೆ. ಈ ಪೈಕಿ 7,90,112 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರದ ಕೋರ್ಟ್ ಗಳಲ್ಲಿ 2,22,431 ಅರ್ಜಿಗಳು ದಾಖಲಾಗಿದ್ದು, 61,986 ಪ್ರಕರಣಗಳನ್ನು ಕೊರೋನಾ ಸಾಂಕ್ರಾಮಿಕದ ನಡುವೆಯೂ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಲಾಕ್ ಡೌನ್ ಸಂದರ್ಭದಲ್ಲಿ ಹಲವು ವರ್ಚುವಲ್ ಕೋರ್ಟ್ ಗಳನ್ನು ಆರಂಭಿಸಲಾಗಿದೆ. ತೀರಾ ಅಪರೂಪದ ಮತ್ತು ಪ್ರಮುಖ ಪ್ರಕರಣಗಳ ವಿಚಾರಣೆಗಳನ್ನು ನಡೆಸಲಾಗುತ್ತಿದೆ. ಕೋರ್ಟ್ ಗಳು ಸಂಪೂರ್ಣ ಮಟ್ಟದಲ್ಲಿ ಪುನಾರಂಭವಾಗುವವರೆಗೂ ಈ ವರ್ಚುವಲ್ ಕೋರ್ಟ್ ಗಳು ಮಹತ್ತರ ಪಾತ್ರವಹಿಸಲಿದೆ. ಲಾಕ್ಡೌನ್ ಸಂದರ್ಭದಲ್ಲಿ ನ್ಯಾಯದಾನ ವಿಳಂಬವಾಗಬಾರದು ಎಂಬ ಕಾರಣಕ್ಕೆ ವರ್ಚುವಲ್ ಕೋರ್ಟ್ ಗಳನ್ನು ಆರಂಭಿಸಲಾಗಿದೆ.  ಆದರೆ ವರ್ಚುವಲ್ ಕೋರ್ಟ್ ಗಳೇ ಮುಕ್ತ ಕೋರ್ಟ್ ಗಳಿಗೆ ಎಂದಿಗೂ ಪರ್ಯಾಯವಾಗಲಾರದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT