ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗಣ್ಯರು ಅಯೋಧ್ಯೆಯ ಭಗವಾನ್ ರಾಮ ದೇವಾಲಯದ 'ಭೂಮಿ ಪೂಜೆ' ನಡೆಸಲು ನಿರ್ಧರಿಸಿರುವ ದಿನದಂದು, ಬೆಳಕಿನ ಹಬ್ಬ - ದೀಪಾವಳಿಯ ಸನ್ನಿವೇಶದಂತೆ ಕಾರ್ಯಕ್ರಮ ಆಯೋಜಿಸುವ ಆಲೋಚನೆ ಇದೆ, ಅಯೋಧ್ಯೆಯ ಎಲ್ಲಾ ದೇವಾಲಯಗಳು ಮತ್ತು ಮನೆಗಳಲ್ಲಿ ದೀಪ ಹಾಗೂ ಮೇಣದ ಬತ್ತಿಗಳಿಂದ ಬೆಳಗಿಸಲಾಗುತ್ತದೆ.
ರಾಮ ದೇವಾಲಯ ದ ನಿರ್ಮಾಣಕ್ಕಾಗಿ 'ಭೂಮಿ ಪೂಜೆಯ ಅದ್ಭುತ ಸಮಾರಂಭವು ಭಗವಾನ್ ರಾಮನನ್ನು 14 ವರ್ಷಗಳ ವನವಾಸದ ನಂತರ ಜನ್ಮಭೂಮಿಗೆ ಸಂಭ್ರಮದಿಂದ ಸ್ವಾಗತಿಸುವುದನ್ನು ಸೂಚಿಸುತ್ತದೆ. ರಾಮ ದೇವಾಲಯದ ನಿರ್ಮಾಣದ ಭೂಮಿ ಪೂಜೆ ಸಮಯದಲ್ಲಿ, 14 ವರ್ಷಗಳ ವನವಾಸ ಕಳೆದ ನಂತರ ರಾಮ ಅಯೋಧ್ಯೆಗೆ ಮರಳಿದ ದಿನದ ಹೋಲಿಕೆಯನ್ನು ಪುನರಾವರ್ತಿಸಲು ಅಯೋಧ್ಯೆಯ ಪ್ರತಿಯೊಂದು ದೇವಾಲಯ ಮತ್ತು ಮನೆಗಳನ್ನು ದೀಪ ಹಾಗೂ ಮೇಣದ ಬತ್ತಿಗಳೊಂದಿಗೆ ಬೆಳಗಿಸುವ ಯೋಜನೆ ಇದೆ.
ಮೂಲಗಳ ಪ್ರಕಾರ ಅಯೋಧ್ಯೆ ಮಾತ್ರವಲ್ಲದೆ ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಮತ್ತು ತಮ್ಮ ಸುತ್ತಮುತ್ತಲಿನ ದೇವಾಲಯಗಳನ್ನು, ಧಾರ್ಮಿಕ ಸ್ಥಳಗಳಲ್ಲಿ ದೀಪ ಬೆಳಗಲು ಮನವಿ ಮಾಡಲಾಗುವುದು ಮತ್ತು ವಿಶೇಷ ಸಂದರ್ಭವನ್ನು ಗುರುತಿಸಲು ದೈಹಿಕ ಅಂತರದ ಮುನ್ನೆಚ್ಚರಿಕೆಗಳನ್ನು ಖಚಿತಪಡಿಸಿಕೊಳ್ಳಲು ಸಹ ವಿನಂತಿಸಲಾಗುವುದು. ಏತನ್ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ 'ಭೂಮಿ ಪೂಜೆಗೆ' ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ. ಕೋವಿಡ್ 19 ರ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸುಮಾರು 200 ಮಂದಿಗೆ ಮಾತ್ರ ಕಾರ್ಯಕ್ರ್ಮದ ಆಹ್ವಾನ ಸಲ್ಲಿಕೆಯಾಗಿದೆ,
ರಾಮ ದೇವಾಲಯ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿರುವ ಸ್ಥಳವನ್ನು ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ 9 ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.ಫೆಬ್ರವರಿ 5 ರಂದು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸುವುದಾಗಿ ಪ್ರಧಾನಿ ಘೋಷಿಸಿದ್ದರು. ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ಮೇಲ್ವಿಚಾರಣೆಯನ್ನು 15 ಸದಸ್ಯರ ರಾಮ್ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.