ಪ್ರಿಯಾಂಕ ಗಾಂಧಿ ವಾದ್ರಾ 
ದೇಶ

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಹೊಸದಾಗಿ ಬರುವ ಬಿಜೆಪಿ ನಾಯಕನನ್ನು ಚಹಾ ಸೇವನೆಗೆ ಕರೆದ ಪ್ರಿಯಾಂಕ ಗಾಂಧಿ!

ಸರ್ಕಾರಿ ಬಂಗಲೆಯನ್ನು ತ್ಯಜಿಸುವುದಕ್ಕೆ ಮೊದಲು ಆ ಮನೆಗೆ ಪ್ರವೇಶಿಸಿ ವಾಸ್ತವ್ಯ ಹೂಡಲಿರುವ ಬಿಜೆಪಿ ನಾಯಕ ಅನಿಲ್ ಬಲುನಿಯವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಚಹಾ ಸೇವನೆಗೆ ಕರೆದಿದ್ದಾರೆ.

ನವದೆಹಲಿ: ಸರ್ಕಾರಿ ಬಂಗಲೆಯನ್ನು ತ್ಯಜಿಸುವುದಕ್ಕೆ ಮೊದಲು ಆ ಮನೆಗೆ ಪ್ರವೇಶಿಸಿ ವಾಸ್ತವ್ಯ ಹೂಡಲಿರುವ ಬಿಜೆಪಿ ನಾಯಕ ಅನಿಲ್ ಬಲುನಿಯವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಚಹಾ ಸೇವನೆಗೆ ಕರೆದಿದ್ದಾರೆ.

ದೆಹಲಿಯ 35 ಲೋಧಿ ಎಸ್ಟೇಟ್ ಬಂಗಲೆಯಲ್ಲಿ 1997ರಿಂದ ಪ್ರಿಯಾಂಕಾ ಗಾಂಧಿ ವಾಸವಾಗಿದ್ದರು. ಅವರ ವಿಶೇಷ ರಕ್ಷಣಾ ಗುಂಪು(ಎಸ್ ಪಿಜಿ) ಭದ್ರತೆಯನ್ನು ಗೃಹ ಸಚಿವಾಲಯ ವಾಪಸ್ ಪಡೆದ ನಂತರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೊಟೀಸ್ ಜಾರಿ ಮಾಡಿತ್ತು.

ಜುಲೈ ಒಂದರಿಂದ ಅವರ ಸರ್ಕಾರಿ ನಿವಾಸದ ಸೌಲಭ್ಯ ರದ್ದಾಗಿರುವುದರಿಂದ ಆಗಸ್ಟ್ 1ರೊಳಗೆ ಮನೆ ಖಾಲಿ ಮಾಡಬೇಕೆಂದು ನೊಟೀಸ್ ನಲ್ಲಿ ಸೂಚಿಸಲಾಗಿತ್ತು.

ಬರುವ ಆಗಸ್ಟ್ 1ರೊಳಗೆ ಪ್ರಿಯಾಂಕಾ ಅವರು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲಿದ್ದು ಬಿಟ್ಟು ಹೋಗುವ ಸಂದರ್ಭದಲ್ಲಿ ಅಲ್ಲಿ ವಾಸಿಸಲು ಬರುತ್ತಿರುವ ಬಿಜೆಪಿ ನಾಯಕ ಅನಿಲ್ ಬಲುನಿ ಮತ್ತು ಅವರ ಪತ್ನಿಗೆ ಚಹಾ ಸೇವನೆಗೆ ಬರುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ಅನಿಲ್ ಬಲುನಿ ಅವರ ಕಡೆಯಿಂದ ಪ್ರತಿಕ್ರಿಯೆ ಬರಬೇಕಷ್ಟೆ.

ಸದ್ಯ ಪ್ರಿಯಾಂಕಾ ಅವರು ಗುರುಗ್ರಾಮ್ ನ ತಮ್ಮ ನಿವಾಸದಲ್ಲಿ ವಾಸಿಸುತ್ತಿದ್ದು ನಂತರದ ದಿನಗಳಲ್ಲಿ ದೆಹಲಿಯಲ್ಲಿ ಮನೆ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!