ಆಯೋಧ್ಯೆ: ಮಹಮದ್ ಫೈಜ್ ಖಾನ್... ಹೆಸರಿಂದ ಇವರು ಮುಸ್ಲಿಂ, ಆದರೆ, ಅವರೊಬ್ಬ ಭಗವಾನ್ ರಾಮನ ಭಕ್ತ.. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆಯನ್ನು ಕಣ್ತುಂಬಿಕೊಳ್ಳಲು ೮೦೦ ಕಿಲೋ ಮೀಟರ್ ಕಾಲ್ನೆಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ಇವರು ಶ್ರೀರಾಮನ ತಾಯಿ ಕೌಸಲ್ಯಾದೇವಿ ಜನ್ಮಸ್ಥಳವೆಂದು ನಂಬಲಾಗಿರುವ ಚತ್ತೀಸ್ ಗಢದ ಚಂದ್ ಖುರಿ ಗ್ರಾಮದ ವಾಸಿ. ಈ ವ್ಯಕ್ತಿಗೆ ಹಿಂದೂ ದೇವರುಗಳಲ್ಲಿ ಅತ್ಯಂತ ಭಕ್ತಿ, ಗೌರವ. ಅದೆಷ್ಟೋ ಬಾರಿ ದೇವರುಗಳ ಸ್ಮರಣೆಯಲ್ಲಿ ಪರವವಶಗೊಳ್ಳುತ್ತಾರೆ. ಹಲವು ಶತಮಾನಗಳ ಕನಸು ನನಸಾಗುತ್ತಿರುವ ಆಯೋಧ್ಯೆ ರಾಮ ಮಂದಿರದ ಅಡಿಪಾಯದ ಭೂಮಿ ಪೂಜೆ ವೀಕ್ಷಿಸಲು ಕಾಲ್ನಡಿಗೆಯಲ್ಲಿ ಹೊರಟು ಬಿಟ್ಟಿದ್ದಾರೆ. ಪ್ರಸ್ತುತ ಆವರು ಮಧ್ಯ ಪ್ರದೇಶದ ಅನುಪ್ಪೂರ್ ತಲುಪಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮವೊಂದರಲ್ಲಿ ಮಾತನಾಡಿ.. ಹೀಗೆ ದೇವಾಲಗಳ ಸಂದರ್ಶಿಸುವುದು ನನಗೆ ಹೊಸದೇನು ಅಲ್ಲ, ೧,೫೦೦ ಕಿ.ಮೀ ನಡೆದು ಹಾದಿ ಮಧ್ಯೆ ಗುಡಿ, ಆಶ್ರಮಗಳಲ್ಲಿ ವಾಸ ಮಾಡಿದ್ದೇನೆ. ಅವುಗಳಿಗೆ ಹೋಲಿಸಿದರೆ ಈ ಪ್ರಯಾಣ ಕೇವಲ ೮೦೦ ಕಿಲೋ ಮೀಟರ್ ಮಾತ್ರ ಎಂದು ಹೇಳುತ್ತಾರೆ ಖಾನ್.
ಈವರೆಗೂ ಯಾರೊಬ್ಬರು ನನ್ನ ವಿರುದ್ದ ಮಾತನಾಡಿಲ್ಲ. ನಾನು ಮುಸ್ಲಿಂ ಹೌದು.. ಆದರೆ ನನ್ನ ಪೂರ್ವಿಕರು ಹಿಂದೂಗಳು. ಪಾಕಿಸ್ತಾನ ರಾಷ್ಟ್ರಕವಿ ಅಲ್ಲಮಾ ಇಕ್ಬಾಲ್.. ರಾಮನನ್ನು ಭಾರತ ದೇಶದ ದೇವರು ಎಂದು ಹೇಳಿದ್ದಾರೆ. ಹಾಗಾಗಿ ನಾನು ಭಕ್ತಿಯಿಂದ ಶ್ರೀರಾಮರ ಮಾತೆ ಕೌಸಲ್ಯಾ ಜನ್ಮಭೂಮಿ ಚಂದ್ ಖುರಿಯಿಂದ ಆಯೋಧ್ಯೆಗೆ ಮಣ್ಣು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಆಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಿಸಲಿರುವ ರಾಮ ಮಂದಿರಕ್ಕೆ ಮುಂದಿನ ತಿಂಗಳು ೫ ರಂದು ಭೂಮಿ ಪೂಜೆ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ.