ಮನೋಹರ್ ಪರ್ರಿಕರ್ 
ದೇಶ

ಮಹದಾಯಿ ನೀರು ಹಂಚಿಕೆಯಲ್ಲಿ ಮನೋಹರ್ ಪರ್ರಿಕರ್ ರಾಜಿ ಮಾಡಿಕೊಂಡಿದ್ದರೇ?: ವಿವಾದ ಹುಟ್ಟಿಸಿದೆ ಜೀವನ ಚರಿತ್ರೆ!

ಮಹದಾಯಿ ನದಿ ನೀರಿನ ಪಾಲು  ರಾಜ್ಯಕ್ಕೆ ನ್ಯಾಯಯುತವಾಗಿ ಸಿಗುವಲ್ಲಿ ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹೋರಾಟ ಮಾಡಿದ್ದರು, ಗೋವಾದ ಹಿತಾಸಕ್ತಿಗಳ ವಿಚಾರದಲ್ಲಿ ಅವರೆಂದೂ ರಾಜಿ ಮಾಡಿಕೊಂಡಿರಲಿಲ್ಲ ಎಂದು ಅವರ ಬಗ್ಗೆ ಬರೆದಿರುವ ಜೀವನ ಚರಿತ್ರೆಯ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಪ್ರತಿಪಾದಿಸಿದ್ದಾರೆ.

ಬೆಳಗಾವಿ: ಮಹದಾಯಿ ನದಿ ನೀರಿನ ಪಾಲು  ರಾಜ್ಯಕ್ಕೆ ನ್ಯಾಯಯುತವಾಗಿ ಸಿಗುವಲ್ಲಿ ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹೋರಾಟ ಮಾಡಿದ್ದರು, ಗೋವಾದ ಹಿತಾಸಕ್ತಿಗಳ ವಿಚಾರದಲ್ಲಿ ಅವರೆಂದೂ ರಾಜಿ ಮಾಡಿಕೊಂಡಿರಲಿಲ್ಲ ಎಂದು ಅವರ ಬಗ್ಗೆ ಬರೆದಿರುವ ಜೀವನ ಚರಿತ್ರೆಯ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಪ್ರತಿಪಾದಿಸಿದ್ದಾರೆ.

ಭಾಯ್(ಪರ್ರಿಕರ್) ಮತ್ತು ಅವರ ಪರಂಪರೆ ಗೌರವಯುತವಾದ ಸ್ಥಾನಮಾನವನ್ನು ಹೊಂದಿದ್ದಾರೆ. ಗೋವಾ ರಾಜ್ಯದ ಹಿತಕ್ಕಾಗಿ ಅಷ್ಟೊಂದು ಶ್ರಮಿಸಿದ್ದ ವ್ಯಕ್ತಿಯೊಬ್ಬರ ಬಗ್ಗೆ ಮನಬಂದಂತೆ ಬರೆದಿರುವುದರ ಬಗ್ಗೆ ನಿಜಕ್ಕೂ ಬೇಸರವಾಗುತ್ತದೆ. ಕಳೆದ ಹಲವು ದಶಕಗಳಿಂದ ಮಹದಾಯಿ ನದಿ ನೀರನ್ನು ತಮ್ಮ ರಾಜ್ಯಕ್ಕೆ ತಿರುಗಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಹೋರಾಡುತ್ತಿದ್ದು ತಮ್ಮ ಸರ್ಕಾರ ಇದಕ್ಕೆ ವಿರೋಧವಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಹೇಳಿದ್ದಾರೆ.

ಸದ್ಗುರು ಪಾಟೀಲ್ ಮತ್ತು ಮಯಾಭೂಷಣ್ ನಗ್ವೆಂಕರ್ ಇಬ್ಬರೂ ಗೋವಾದವರಾಗಿದ್ದು ಅವರು ಮನೋಹರ್ ಪರ್ರಿಕರ್ ಬಗ್ಗೆ “An Extraordinary Life: A Biography of Manohar Parrikar’’ ಎಂಬ ಪುಸ್ತಕ ಬರದಿದ್ದು ಅದರಲ್ಲಿ ಮನೋಹರ್ ಪರ್ರಿಕರ್ ಅವರ ಆಡಳಿತ, ರಾಜಕೀಯ ಜೀವನ, ಗೋವಾದ ಬಗ್ಗೆ ಅವರಿಗಿದ್ದ ನಿಲುವುಗಳ ಬಗ್ಗೆ ನಮೂದಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಯಾಭೂಷಣ್, ನಾವು ಹೇಳಬೇಕಾಗಿದ್ದನ್ನು ಹೇಳಿದ್ದೇವೆ, ಓದುಗರು ಅವರವರ ಅಭಿಪ್ರಾಯ ಹೇಳುತ್ತಾರೆ ಎಂದರಷ್ಟೇ ಹೊರತು ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಲಿಲ್ಲ.

ಲೇಖಕರು ಪುಸ್ತಕದ 212ನೇ ಪುಟದಲ್ಲಿ, 2018ರ ವಿಧಾನಸಭೆ ಚುನಾಣೆಗೆ ಮುನ್ನ ಬಿಜೆಪಿಯ ಇಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದ ಪರ್ರಿಕರ್, ಮಾನವೀಯ ನೆಲೆಯಲ್ಲಿ ಮಹದಾಯಿ ನದಿ ನೀರನ್ನು ಹಂಚಿಕೆ ಮಾಡಲು ಸಿದ್ದವಿರುವುದಾಗಿ ಹೇಳಿದ್ದರು. ಇದರಿಂದ ಮಹದಾಯಿ ನದಿ ನೀರಿನ ಎರಡು ದಶಕಗಳ ಕಾನೂನು ಹೋರಾಟದಲ್ಲಿ ಗೋವಾಕ್ಕೆ ಹಿನ್ನಡೆಯಾಗಿದೆ ಎಂದು ಬರೆದಿದ್ದಾರೆ.

ಪರ್ರಿಕರ್ ಅವರು ಕರ್ನಾಟಕದ ಬಗ್ಗೆ ಮೃದುಧೋರಣೆ ತಳೆದಿದ್ದು ಅಂದು ವಿರೋಧ ಪಕ್ಷದ ನಾಯಕರಿಗೆ ಇಷ್ಟವಾಗಿರಲಿಲ್ಲ. ಮಾಜಿ ಸಿಎಂ ದಿಗಂಬರ್ ಕಾಮತ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT