ಹಾವು 
ದೇಶ

ಯುವಕನ ಪ್ಯಾಂಟಿನೊಳಗೆ ಹಾವು ತೂರಿ ಇಡೀ ರಾತ್ರಿ ಜಾಗರಣೆ!

ಗಾಢ ನಿದ್ರೆಯಲ್ಲಿದ್ದ ಯುವಕನ ಪ್ಯಾಂಟಿನೊಳಗೆ ತೂರಿದ ಹಾವು ಆತನಿಗೆ ನರಕ ದರ್ಶನ ಮಾಡಿಸಿದ್ದು, ಏಳು ಗಂಟೆಗಳ ಕಾಲ ಹಾವು ಪ್ಯಾಂಟಿನೊಳಗಿದ್ದ ಕಾರಣ ರಾತ್ರಿ ಪೂರ್ತಿ ಸ್ವಲ್ಪವೂ ಕದಲದೆ ನಿಲ್ಲುವಂತಾಗಿದ್ದು, ಕೊನೆಗೆ ಬೆಳಕರಿದ ನಂತರ ಹಾವು ಹಿಡಿಯುವ ವ್ಯಕ್ತಿ ಬಂದು ಚಾಕಚಕ್ಯತೆಯಿಂದ ಅದನ್ನು ಹೊರಗೆಳೆದ ನಂತರ ಪ್ರಮಾದ ತಪ್ಪಿದೆ.

ಲಖನೌ: ಗಾಢ ನಿದ್ರೆಯಲ್ಲಿದ್ದ ಯುವಕನ ಪ್ಯಾಂಟಿನೊಳಗೆ ತೂರಿದ ಹಾವು ಆತನಿಗೆ ನರಕ ದರ್ಶನ ಮಾಡಿಸಿದ್ದು, ಏಳು ಗಂಟೆಗಳ ಕಾಲ ಹಾವು ಪ್ಯಾಂಟಿನೊಳಗಿದ್ದ ಕಾರಣ ರಾತ್ರಿ ಪೂರ್ತಿ ಸ್ವಲ್ಪವೂ ಕದಲದೆ ನಿಲ್ಲುವಂತಾಗಿದ್ದು, ಕೊನೆಗೆ ಬೆಳಕರಿದ ನಂತರ ಹಾವು ಹಿಡಿಯುವ ವ್ಯಕ್ತಿ ಬಂದು ಚಾಕಚಕ್ಯತೆಯಿಂದ ಅದನ್ನು ಹೊರಗೆಳೆದ ನಂತರ ಪ್ರಮಾದ ತಪ್ಪಿದೆ.

ಉತ್ತರ ಪ್ರದೇಶ ಮಿರ್ಜಾಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆ ರಾ ತ್ರಿ ತಾನು ಅನುಭವಿಸಿದ ನರಕ ಯಾತನೆ ನೆನೆಸಿಕೊಂಡು ಯುವಕ ಕಣ್ಣೀರು ಹಾಕಿದ್ದಾನೆ.

ಸಿಕಂದರ್ ಪುರ್ ಗ್ರಾಮದಲ್ಲಿ ವಿದ್ಯುತ್ ಕಂಬ, ವೈರ್ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು. ಲವ್ಲೇಶ್ ಎಂಬ ವ್ಯಕ್ತಿ ಕೆಲಸ ಮಾಡಿದ ನಂತರ ಸಹ ಕಾರ್ಮಿಕರೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ಮಲಗಿಕೊಂಡಿದ್ದ.

ಅನಿರೀಕ್ಷಿತವಾಗಿ ಸರ್ಪವೊಂದು ಆತನ ಪ್ಯಾಂಟಿನೊಳಗೆ ಸೇರಿಕೊಂಡಿತು. ಕೂಡಲೇ ಏನೂ ತೂರಿದೆ ಎಂದು ಎಚ್ಚರಗೊಂಡು ನೋಡಿದಾಗ ಹಾವು ಕಾಣಿಸಿದ್ದರಿಂದ ಭಯಗೊಂಡ ಯುವಕ ಸ್ವಲ್ಪವೂ ಕದಲದೆ ಕಂಬವೊಂದನ್ನು ಆಸರೆಯಾಗಿ ಹಿಡಿದುಕೊಂಡು ರಾತ್ರಿಯಿಡೀ ನಿಂತುಕೊಂಡು ಸಂಕಷ್ಟ ಅನುಭವಿಸಿದ. 

ವಿಷಯ ತಿಳಿದು ಸ್ಥಳೀಯರು ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿ ಹಾವನ್ನು ಹೊರೆಗೆ ತೆಗೆಸಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಂಬುಲೆನ್ಸ್ ಕೂಡಾ ಸ್ಥಳಕ್ಕೆ ಕರೆಸಿದ್ದರು. ಆದರೆ, ಅದೃಷ್ಟವಶಾತ್ ಹಾವು ಯುವಕನನ್ನು ಕಚ್ಚಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT