ಚೈನಾ ವಸ್ತುಗಳು ನಿಷೇಧಿಸಬೇಕು.. ಆ ದೇಶವನ್ನು ದ್ವೇಷಿಸ ಬೇಕಿಲ್ಲ
ಚೈನಾ ವಸ್ತುಗಳ ಬಳಕೆ ಕೈಬಿಡಬೇಕು, ಆ ದೇಶದ ಯಾವುದೇ ಎಲ್ಲಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಲಡಾಖ್ ಇಂಜನಿಯರ್ ಸೋನಂ ವಾಂಗ್ ಚುಕ್ ಇತ್ತೀಚಿಗೆ ಹೇಳಿದ್ದರು.
ಶ್ರೀನಗರ: ಚೈನಾ ವಸ್ತುಗಳ ಬಳಕೆ ಕೈಬಿಡಬೇಕು, ಆ ದೇಶದ ಯಾವುದೇ ಎಲ್ಲಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಲಡಾಖ್ ಇಂಜನಿಯರ್ ಸೋನಂ ವಾಂಗ್ ಚುಕ್ ಇತ್ತೀಚಿಗೆ ಹೇಳಿದ್ದರು.
ತಮ್ಮ ಈ ಹೇಳಿಕೆಯ ಬಗ್ಗೆ ಇಂದು ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಚೈನಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಜನರಿಗೆ ಕರೆ ನೀಡಿದ್ದೇನೆ. ಆದರೆ ಆ ದೇಶವನ್ನು ದ್ವೇಷಿಸಿ ಎಂದು ಕರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚೈನಾ ಸರ್ಕಾರ ಮಾಡುತ್ತಿರುವ ತಪ್ಪುಗಳಿಗೆ ಅಲ್ಲಿನ ಜನರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರನ್ನು ದ್ವೇಷಿಸುವ ಅಗತ್ಯವಿಲ್ಲ. ಕೇವಲ ಅಲ್ಲಿನ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಆ ದೇಶದ ವಸ್ತುಗಳನ್ನು ಬಳಸದಿರಲು ಕರೆ ನೀಡಿರುವೆ ಎಂದು ವಾಂಗ್ ಚುಕ್ ವಿವರಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.