ದೇಶ

ಸಾಧ್ಯವಾದರೆ ಮಧ್ಯದ ಸೀಟುಗಳನ್ನು ಖಾಲಿ ಬಿಡಿ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ

Lingaraj Badiger

ನವದೆಹಲಿ: ಸಾಧ್ಯವಾದರೆ ಮಧ್ಯದ ಸೀಟುಗಳನ್ನು ಖಾಲಿ ಬಿಟ್ಟು ಉಳಿದ ಸೀಟುಗಳನ್ನು ಪ್ರಯಾಣಿಕರಿಗೆ ಹಂಚಿಕೆ ಮಾಡುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸೋಮವಾರ ಸೂಚಿಸಿದೆ.

ಆದಾಗ್ಯೂ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದಾಗ ಮಧ್ಯದ ಆಸನವನ್ನು ನೀಡಲಾಗಿದ್ದರೆ, ಅವರಿಗೆ ಗೌನ್‌ನಂತಹ ಹೆಚ್ಚುವರಿ ರಕ್ಷಣಾ ಸಾಧನಗಳು, ಮೂರು-ಲೇಯರ್ ಫೇಸ್ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಅನ್ನು ನೀಡಬೇಕು ಎಂದು ಡಿಜಿಸಿಎ ಆದೇಶಿಸಿದೆ.

ಕೊರೋನಾ ವೈರಸ್ ಲಾಕ್‌ಡೌನ್ ಕಾರಣದಿಂದಾಗಿ ಎರಡು ತಿಂಗಳ ನಂತರ ಮೇ 25 ರಿಂದ ದೇಶಿ ವಿಮಾನ ಹಾರಾಟವನ್ನು ಪುನರಾರಂಭಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ಇನ್ನೂ ಅನುಮತಿ ನೀಡಿಲ್ಲ.

SCROLL FOR NEXT