ಶ್ರಮಿಕ್ ರೈಲು 
ದೇಶ

ಶ್ರಮಿಕ್ ರೈಲಿನಲ್ಲಿ ವಲಸೆ ಕಾರ್ಮಿಕ ಸಾವು: ಶವದೊಂದಿಗೆ ಬಂಗಾಳಕ್ಕೆ ಪ್ರಯಾಣಿಸಿದ ಸಹ ಪ್ರಯಾಣಿಕರು!

ರಾಜಸ್ಥಾನದಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಶ್ರಮಿಕ್ ವಿಶೇಷ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ  50 ವರ್ಷದ ವಲಸೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಆತನ ಶವದೊಂದಿಗೆ ಸುಮಾರು 8 ಗಂಟೆಗಳ ಕಾಲ ಪ್ರಯಾಣಿಸಿದ ಸಹ ಪ್ರಯಾಣಿಕರು ಇದೀಗ ಭೀತಿಗೊಂಡಿರುವುದಾಗಿ  ಪೊಲೀಸರು ಹೇಳಿದ್ದಾರೆ.

ಮಾಲ್ಡಾ: ರಾಜಸ್ಥಾನದಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಶ್ರಮಿಕ್ ವಿಶೇಷ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ  50 ವರ್ಷದ ವಲಸೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಆತನ ಶವದೊಂದಿಗೆ ಸುಮಾರು 8 ಗಂಟೆಗಳ ಕಾಲ ಪ್ರಯಾಣಿಸಿದ ಸಹ ಪ್ರಯಾಣಿಕರು ಇದೀಗ ಭೀತಿಗೊಂಡಿರುವುದಾಗಿ  ಪೊಲೀಸರು ಹೇಳಿದ್ದಾರೆ.

ಮಾಲ್ಡಾ ಜಿಲ್ಲೆಯ ಹರಿಶ್ಚಂದ್ರಪುರದಿಂದ ಬಂದಿದ್ದ ಬುದ್ದ ಪರಿಹಾರ್ ಮೃತಪಟ್ಟು ವಲಸೆ ಕಾರ್ಮಿಕ. ಇವರು ರಾಜಸ್ಥಾನದ ಬಿಕನೇರ್ ನಲ್ಲಿನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಅಳಿಯ ಸರಾಜ್ ದಾಸ್ ಕೂಡಾ ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಪರಿಹಾರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, 20 ವರ್ಷದಿಂದ ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. 
ಲಾಕ್ ಡೌನ್ ಹಿನ್ನೆಲೆಯಲ್ಲಿ ಪರಿಹಾರ್ ಮತ್ತು ದಾಸ್ ಇಬ್ಬರು ಕೆಲಸ ಕಳೆದುಕೊಂಡು, ಮಾಲ್ಡಾಕ್ಕೆ ತೆರಳಲು ಹಲವು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಅಂತಿಮವಾಗಿ ಮೇ 29ರಂದು  ಬೆಳಗ್ಗೆ 11 ಗಂಟೆಗೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಪಡೆದುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಉತ್ತರ ಪ್ರದೇಶದ ಮುಘಲ್ ಸರಾಯ್ ಬಳಿ ಶನಿವಾರ ರಾತ್ರಿ ಪರಿಹಾರ್ ಮೃತಪಟ್ಟಿದ್ದಾರೆ. ಅವರು ಕೋವಿಡ್- 19ನಿಂದ ಮೃತಪಟ್ಟಿದ್ದಾರೆಯೇ ಎಂಬ ಶಂಕೆ ಸಹ ಪ್ರಯಾಣಿಕರಲ್ಲಿ ಮನೆ ಮಾಡಿದ್ದು, ನಮಗೂ ಸೋಂಕು ಹರಡಬಹುದು ಎಂಬ ಭೀತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರಮಿಕ್ ರೈಲು ಮಾಲ್ಡ್ ನಿಲ್ದಾಣಕ್ಕೆ ತಲುಪಿದ ನಂತರ ಮೃತದೇಹವನ್ನು ಸರ್ಕಾರದ ರೈಲ್ವೆ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪರಿಹಾರ್ ಕ್ಷಯದಿಂದ ಬಳಲುತ್ತಿದ್ದರು. ಪ್ರಯಾಣದ ವೇಳೆಯಲ್ಲಿ ಸಾಕಷ್ಟು ಬಳಲಿದ್ದ ಅವರಿಗೆ ಔಷಧಿ ನೀಡಿರುವುದಾಗಿ ದಾಸ್ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ನಂತರ ಈ ಘಟನೆ ಬಗ್ಗೆ ಇಂಗ್ಲೀಷ್ ಬಜಾರ್ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಾಲ್ಡಾ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT