ದೇಶ

ಪೂರ್ವ ಲಡಾಕ್ ನಲ್ಲಿ ಸಾಕಷ್ಟು ಸಂಖ್ಯೆಯ ಚೀನಾ ಸೇನಾಪಡೆ ಬೀಡುಬಿಟ್ಟಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

Sumana Upadhyaya

ನವದೆಹಲಿ:ಪೂರ್ವ ಲಡಾಕ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನಾದ ಸೇನಾಪಡೆ ಬೀಡುಬಿಟ್ಟಿದ್ದು ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಭಾರತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತ ಮತ್ತು ಚೀನಾದ ಮಿಲಿಟರಿ ನಾಯಕರ ಉನ್ನತ ಮಟ್ಟದ ಸಭೆ ನಾಡಿದ್ದು 6ನೇ ತಾರೀಖಿನಂದು ನಡೆಯಲಿದ್ದು ಭಾರತ ತನ್ನ ನಿಲುವಿಗೆ ಬದ್ಧವಾಗಿದ್ದು ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ.

ಪೂರ್ವ ಲಡಾಕ್ ನ ಸೂಕ್ಷ್ಮ ಪ್ರದೇಶಗಳಲ್ಲಿ ಸದ್ಯದ ಪರಿಸ್ಥಿತಿ ಬಗ್ಗೆ ಕೇಳಿದಾಗ ರಾಜನಾಥ್ ಸಿಂಗ್, ತಮಗೆ ಸೇರಿದ ಪ್ರಾಂತ್ಯ ಎಂದು ಹೇಳುವ ಸ್ಥಳದವರೆಗೆ ಚೀನಾದ ಸೇನಾಪಡೆ ಬಂದು ಬೀಡುಬಿಟ್ಟಿದ್ದು ಭಾರತ ಅದು ತನಗೆ ಸೇರಿದ ಜಾಗ ಎಂದು ಅಚಲವಾಗಿ ನಂಬುತ್ತದೆ ಎಂದರು.

ಲಡಾಕ್ ನ ಗಡಿ ವಾಸ್ತವ ರೇಖೆಯ ಪಂಗೊಂಗ್ ಟ್ಸೊ ಮತ್ತು ಗಲ್ವಾನ್ ಕಣಿವೆ ಪ್ರದೇಶಗಳಲ್ಲಿ ಚೀನಾದ ಸೇನಾಪಡೆ ನಿಯೋಜನೆಗೊಂಡಿದೆ ಎಂದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ.

SCROLL FOR NEXT