ದೇಶ

ಭೂಗ್ರಹದ ಸಮೃದ್ಧ ಜೀವವೈವಿಧ್ಯತೆ ಸಂರಕ್ಷಿಸುವ ಸಂಕಲ್ಪಕ್ಕೆ ಪ್ರಧಾನಿ ಮೋದಿ ಕರೆ

Manjula VN

ನವದೆಹಲಿ: ಭೂಗ್ರಹದಲ್ಲಿನ ಸಸ್ಯ ಮತ್ತು ಪ್ರಾಣಿ-ಪಕ್ಷಿ ಸಂಕುಲವನ್ನು ಸಂರಕ್ಷಿಸುವಂತೆ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಶುಕ್ರವಾರ ಜನತೆಗೆ ಕರೆ ನೀಡಿದ್ದಾರೆ.

‘ನಮ್ಮ ಭೂಗ್ರಹದ ಸಮೃದ್ಧ ಜೀವವೈವಿಧ್ಯತೆಯನ್ನು ಕಾಪಾಡುವ ನಮ್ಮ ಸಂಕಲ್ಪವನ್ನು ನಾವು ಪುನರುಚ್ಚರಿಸುತ್ತೇವೆ. ಸಸ್ಯ ಮತ್ತು ಪ್ರಾಣಿ-ಪಕ್ಷಿ ಸಂರಕ್ಷಿಸಲು ಒಟ್ಟಾಗಿ ಸಾಧ್ಯವಾದಷ್ಟು ಕೆಲಸ ಮಾಡೋಣ. ಮುಂದಿನ ಪೀಳಿಗೆಗೆ ಇನ್ನೂ ಉತ್ತಮ ಪರಿಸರದ ಮತ್ತು ಸಮೃದ್ಧ ಜೀವವೈವಿಧ್ಯತೆಯ ಭೂಮಿಯನ್ನು ಕಾಪಾಡೋಣ' ಎಂದು ದೇಶಕ್ಕೆ ನೀಡಿದ ಸಂದೇಶದಲ್ಲಿ ನರೇಂದ್ರಮೋದಿ ಹೇಳಿದ್ದಾರೆ.

ಇದೇ ವೇಳೆ ಮನ್ ಕಿ ಬಾತ್ ಸಂಚಿಕೆಯ ಭಾಗವೊಂದನ್ನು ಟ್ವಿಟರ್ ನಲ್ಲಿ ಹಂಂಚಿಕೊಂಡಿರುವ ಅವರು, ಅದರಲ್ಲಿ ಮಳೆ ನೀರಿನ ಸಂರಕ್ಷಣೆ ಮತ್ತು ಪ್ರಕೃತಿಯ ಸಮೃದ್ಧ ವೈವಿಧ್ಯತೆಯನ್ನು ರಕ್ಷಿಸುವ ಕುರಿತು ಪ್ರಸ್ತಾಪಿಸಿದ್ದಾರೆ. 

ಜೂನ್.5ರಂದು ಇಡೀ ಪ್ರಪಂಚ ವಿಶ್ವ ಪರಿಸರ ದಿನವನ್ನು ಆಚರಿಸಲಿದ್ದು, ಈ ವರ್ಷ ವಿಶ್ವ ಪರಿಸರ ದದ ವಿಷಯ ಜೈವಿಕ ವೈವಿಧ್ಯತೆಯಾಗಿದೆ. ಪ್ರಸ್ತುತದ ಪರಿಸ್ಥಿತಿಯಲ್ಲಿನ ವಿಚಾರಗಳಿಗೆ ಈ ಥೀಮ್ ಬಹಳ ವಿಶೇಷವಾಗಿದೆ. ಕಳೆದ ಕೆಲವು ವಾರಗಳ ಲಾಕ್'ಡೌನ್ ಸಮಯದಲ್ಲಿ ಜೀವನದ ವೇಗವು ನಿಧಾನವಾಗಿದೆ. ಆದರೆ, ಪ್ರಕೃತಿಯ ಸಮೃದ್ಧ ವೈವಿಧ್ಯತೆ ಅಥವಾ ನಮ್ಮ ಸುತ್ತಲಿನ ಜೀವವೈವಿಧ್ಯತೆಯ ಬಗ್ಗೆ ಆತ್ಮಾವಲೋಕನ ಮಾಡಲು ನಮಗೆ ಅವಕಾಶ ನೀಡಿದೆ. ಶಬ್ಧ ಹಾಗೂ ವಾಯುಮಾಲಿನ್ಯದಿಂದಜಾಗಿ ಬಹುತೇಕ ಪಕ್ಷಿ ಸಂಕುಲ ಕಣ್ಮರೆಯಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಜನರು ಮನೆಗಳಲ್ಲಿಯೇ ಅವುಗಳ ಸುಮಧುರ ಚಿಲಿಪಿಗಳನ್ನು ಮತ್ತೊಮ್ಮೆ ಕೇಳುವ ಅವಕಾಶ ಸಿಕ್ಕಿದೆ, 

ಜಲ ಸಂರಕ್ಷಣೆ ವಿಶೇಷವಾಗಿ ಮಲೆ ನೀರಿನ ಸಂರಕ್ಷಣೆ ಅಗತ್ಯವಾಗಿದ್ದು, ಮುಂಬರುವ ಮಳೆಗಾಲದಲ್ಲಿ ಮಳೆ ನೀರನ್ನು ಉಳಿಸಲು ಪ್ರತೀಯೊಬ್ಬರೂ ಶ್ರಮಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

SCROLL FOR NEXT