ದೇಶ

ತಮಿಳುನಾಡು: ಗಂಡು ಮಗುವಾಗಲಿಲ್ಲ ಎಂದು ಮೂರು ತಿಂಗಳ ಹೆಣ್ಣು ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

Shilpa D

ಈರೋಡ್: ಮೂರು ತಿಂಗಳ ಹೆಣ್ಣು ಮಗವನ್ನು ಕೊಂದು 34 ವರ್ಷದ ಮಹಿಳೆ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮೂಂಗಿಲಪಾಳ್ಯಂ ನಿವಾಸಿ ಸಂಗೀತಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ, ಈಕೆಗೆ ಈಗಾಗಲೇ 9 ವರ್ಷದ ಹೆಣ್ಣು ಮಗುವಿದೆ, ಮತ್ತೊಂದು ಮಗುವಿಗೆ ಗರ್ಭಿಣಿಯಾಗಿದ್ದ ಆಕೆ, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಳು, ಆದರೆ ಮತ್ತೆ ಹೆಣ್ಣು ಮಗು ಜನಿಸಿದ ಕಾರಣ ಆಕೆ ಬೇಸರಗೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಕೆಟ್ ನೀರಿನಲ್ಲಿ ಮಗುವನ್ನು ಮುಳುಗಿಸಿ ಕೊಂದ ಸಂಗೀತಾ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆಕೆ ಪತಿ ಗುಣಶೇಖರ್ ಮನೆಯಿಂದ ಹೊರ ತೆರಳಿದ್ದ, ಅತ್ತೆ ದೊಡ್ಡ ಮೊಮ್ಮಗಳ ಜೊತೆ ಪಕ್ಕದ ಮನೆಗೆ ಹೋಗಿದ್ದರು. ನಂತರ ಮನೆಗೆ ಬಂದ ಪತಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

SCROLL FOR NEXT