ದೇಶ

ಭಾರತ-ಚೀನಾ ಗಡಿಯಲ್ಲಿ ತ್ವರಿತ ಕಾಮಗಾರಿಗೆ ಹೆಲಿಕಾಫ್ಟರ್ ಮೂಲಕ ಬೃಹತ್ ಯಂತ್ರೋಪಕರಣ ರವಾನೆ 

Srinivas Rao BV

ಉತ್ತರಾಖಂಡ್ ನ ಜೋಹಾರ್ ಕಣಿವೆಯ ಲಾಸ್ಪಾಗೆ ಹೆಲಿಕಾಫ್ಟರ್ ಮೂಲಕ ರಸ್ತೆ ನಿರ್ಮಾಣಕ್ಕಾಗಿ ಬಳಕೆ ಮಾಡುವ ಬೃಹತ್ ಯಂತ್ರವನ್ನು ಹೆಲಿಕಾಫ್ಟರ್ ಮೂಲಕ ಇಳಿಸುವ ಪ್ರಕ್ರಿಯೆ ಯಶಸ್ವಿಯಾಗಿದೆ.

2019ರಿಂದಲೂ ಈ ಪ್ರಯತ್ನ ನಡೆಯುತ್ತಿತ್ತು. ಆದರೆ ಈವರೆಗೂ ಸಾಧ್ಯವಾಗಿರಲಿಲ್ಲ. ಜೂ.11 ರಂದು ಹೆಲಿಕಾಫ್ಟರ್ ಮೂಲಕ ಬೃಹತ್ ಯಂತ್ರವನ್ನು ಇಳಿಸಲಾಗಿದೆ. 

ಈ ಬಗ್ಗೆ ಬಿಆರ್ ಒ (ಬಾರ್ಡರ್ ರೋಡ್ ಆರ್ಗನೈಸೇಶನ್) ನ ಮುಖ್ಯ ಇಂಜಿನಿಯರ್ ಬಿಮಲ್ ಗೋಸ್ವಾಮಿ ಮಾಹಿತಿ ನೀಡಿದ್ದು, 
ಭಾರತ-ಚೀನಾ ಗಡಿ ಭಾಗದಲ್ಲಿರುವ ಮುನ್ಸಿಯಾರಿ-ಬುಗ್ಡಿಯಾರ್-ಮಿಲಾಮ್ ರಸ್ತೆ ನಿರ್ಮಾಣ ಕಾಮಗಾರಿ ಮುಂದುವರೆಸಲು ಬೃಹತ್ ಗಾತ್ರದ ಬಂಡೆ ಕತ್ತರಿಸುವ ಯಂತ್ರ ತರಬೇಕಿತ್ತು. ಇದಕ್ಕಾಗಿ ಹಲವು ಬಾರಿ ಹೆಲಿಕಾಫ್ಟರ್ ಮೂಲಕ ಪ್ರಯತ್ನಿಸಲಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಪರಿಣಾಮ 65 ಕಿ.ಮೀ ನಷ್ಟು ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಗಿತ್ತು.

ಎತ್ತರದ ಹಿಮಾಲಯ ಪ್ರದೇಶದಲ್ಲಿ ಈ ರಸ್ತೆ ನಿರ್ಮಾಣವಾಗುತ್ತಿದ್ದು, ಭಾರತ-ಚೀನಾ ಗಡಿಭಾಗದಲ್ಲಿರುವ ಕೊನೆಯ ಸೇನಾ ಪೋಸ್ಟ್ ಗೆ ಈ ರಸ್ತೆ ಸಂಪರ್ಕ ಕಲ್ಪ್ಳಿಸಲಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದ್ದಾರೆ. 2010 ರಲ್ಲಿ 325 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಪ್ರಾರಂಭವಾಗಿತ್ತು.

SCROLL FOR NEXT