ದೆಹಲಿಯ ಆಸ್ಪತ್ರೆಯ ಮುಂದೆ ವೈದ್ಯಕೀಯ ಕಾರ್ಯಕರ್ತರ ಸತತ ಪರಿಶ್ರಮ 
ದೇಶ

ಕೊರೋನಾ: ಭಾರತದಲ್ಲಿ 11,458 ಹೊಸ ಪ್ರಕರಣಗಳು, 386 ಸಾವು; 3 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶನಿವಾರ 3 ಲಕ್ಷ ಗಡಿ ದಾಟಿದ್ದು ಇಂದು ಒಂದೇ ದಿನ 11 ಸಾವಿರದ 458 ಮಂದಿ ಸೋಂಕಿತರ ಪತ್ತೆಯಾಗಿದೆ. ಸಾವಿನ ಸಂಖ್ಯೆ 8 ಸಾವಿರದ 884ಕ್ಕೇರಿದ್ದು 386 ಮಂದಿ ಹೊಸ ಸೋಂಕಿತರ ಮೃತವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ನವದೆಹಲಿ:ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶನಿವಾರ 3 ಲಕ್ಷ ಗಡಿ ದಾಟಿದ್ದು ಇಂದು ಒಂದೇ ದಿನ 11 ಸಾವಿರದ 458 ಮಂದಿ ಸೋಂಕಿತರ ಪತ್ತೆಯಾಗಿದೆ. ಸಾವಿನ ಸಂಖ್ಯೆ 8 ಸಾವಿರದ 884ಕ್ಕೇರಿದ್ದು 386 ಮಂದಿ ಹೊಸ ಸೋಂಕಿತರ ಮೃತವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಂದು 3 ಲಕ್ಷದ 8 ಸಾವಿರದ 993ಕ್ಕೇರಿದ್ದು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಎಂದು ಕೊರೋನಾ ವೈರಸ್ ಅಂಕಿಅಂಶ ವೆಬ್ ಸೈಟ್ ವರ್ಲ್ಡೊಮೀಟರ್ ತಿಳಿಸಿದೆ. ದೇಶದಲ್ಲಿ ಸಕ್ರಿಯ ಕೇಸುಗಳು 1 ಲಕ್ಷದ 45 ಸಾವಿರದ 779, ಇದುವರೆಗೆ 1 ಲಕ್ಷದ 54 ಸಾವಿರದ 329 ಮಂದಿ ಗುಣಮುಖರಾಗಿದ್ದರೆ ಒಬ್ಬ ರೋಗಿ ವಲಸೆ ಹೋಗಿದ್ದಾರೆ. ಇಲ್ಲಿಯವರೆಗೆ ಶೇಕಡಾ 49.9ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ. ಒಟ್ಟು ಕೇಸುಗಳಲ್ಲಿ ವಿದೇಶಿಗರು ಸೇರಿದ್ದಾರೆ.

ಇಂದು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಹೊಸ 386 ಸಾವು ಪ್ರಕರಣಗಳಲ್ಲಿ, 129 ದೆಹಲಿಯಲ್ಲಿ, 127 ಮಹಾರಾಷ್ಟ್ರದಲ್ಲಿ, 30 ಗುಜರಾತ್‌ನಲ್ಲಿ, ಉತ್ತರಪ್ರದೇಶದಲ್ಲಿ 20, ತಮಿಳುನಾಡಿನಲ್ಲಿ 18, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ತಲಾ 9 ಸಾವುಗಳು ಸಂಭವಿಸಿವೆ. ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ 7, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ತಲಾ 6, ಪಂಜಾಬ್‌ನಲ್ಲಿ 4, ಅಸ್ಸಾಂನಲ್ಲಿ 2, ಕೇರಳ, ಜಮ್ಮು ಮತ್ತು ಕಾಶ್ಮೀರ ಮತ್ತು ಒಡಿಶಾದಲ್ಲಿ ತಲಾ 1 ಸಾವು ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್