ಕೋವಿಡ-19 ರಿಂದ ಚೇತರಿಸಿಕೊಂಡಿದ್ದ 93 ವರ್ಷದ ಹಿರಿಯ ಉರ್ದು ಕವಿ ಗುಲ್ಜಾರ್ ದೆಲ್ವಿ ನಿಧನ
ಹಿರಿಯ ಉರ್ದು ಕವಿ ಗುಲ್ಜಾರ್ ದೆಲ್ವಿ ಅವರು ಕೊಯಿಡ್ 19 ರಿಂದ ಚೇತರಿಸಿಕೊಂಡ ಕೆಲ ದಿನಗಳ ನಂತರ ನೋಯ್ಡಾದಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ನವದೆಹಲಿ: ಹಿರಿಯ ಉರ್ದು ಕವಿ ಗುಲ್ಜಾರ್ ದೆಲ್ವಿ ಅವರು ಕೊವಿಡ್-19 ರಿಂದ ಚೇತರಿಸಿಕೊಂಡ ಕೆಲ ದಿನಗಳ ನಂತರ ನೋಯ್ಡಾದಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ಅವರಿಗೆ 94 ವರ್ಷ ವಯಸ್ಸಾಗಿತ್ತು. ಕೊವಿಡ್ ಸೋಂಕು ದೃಢಪಟ್ಟ ದೆಲ್ವಿಯವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಚಿಕಿತ್ಸೆ ಪಡೆದ ನಂತರ ಅವರು ಮನೆಗೆ ಮರಳಿದ್ದರು.
ಕುಟುಂಬ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ, ಜೂ.06 ಹಾಗೂ ಜೂ.07 ರಂದು ನಡೆಸಿದ್ದ ಪರೀಕ್ಷೆಯಲ್ಲಿ ಗುಲ್ಜಾರ್ ಅವರಿಗೆ ಕೋವಿಡ್-19 ಸೋಂಕು ವರದಿ ನೆಗೆಟೀವ್ ಬಂದಿತ್ತು. ಈ ಕಾರಣದಿಂದಾಗಿಯೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಅವರಿಗೆ ಅನರೋಗ್ಯ ಮುಂದುವರೆದಿತ್ತು. ಮಧ್ಯಾಹ್ನ ಊಟ ಮಾಡಿದ್ದ ಗುಲ್ಜಾರ್ ಅವರು ವಿಶ್ರಾಂತಿಗಾಗಿ ಕೋಠಡಿಗೆ ತೆರಳಿದ್ದರು ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೃದಯ ಸ್ತಂಭನದಿಂದ ಗುಲ್ಜಾರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.