ಹುತಾತ್ಮರಾದ ವೀರ ಯೋಧ ಪಳನಿ ಕುಟುಂಬ 
ದೇಶ

20 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿದ್ದ ಹುತಾತ್ಮ ಯೋಧ ಪಳನಿ ಇನ್ನೊಂದು ವರ್ಷದಲ್ಲಿ ನಿವೃತ್ತಿಯಾಗಲಿದ್ದರು!

ಲಡಾಖ್'ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಅಟ್ಟಹಾಸಕ್ಕೆ ಬಲಿಯಾದ ತಮಿಳುನಾಡಿನ ಪಳನಿಯವರು 22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಇನ್ನೊಂದು ವರ್ಷದಲ್ಲಿ ನಿವೃತ್ತರಾಗುವವರಿದ್ದರು. 

ಚೆನ್ನೈ: ಲಡಾಖ್'ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಅಟ್ಟಹಾಸಕ್ಕೆ ಬಲಿಯಾದ ತಮಿಳುನಾಡಿನ ಪಳನಿಯವರು 22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಇನ್ನೊಂದು ವರ್ಷದಲ್ಲಿ ನಿವೃತ್ತರಾಗುವವರಿದ್ದರು. 

ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಪಳನಿಯವರು ಸಾಕಷ್ಟು ಕನಸ್ಸುಗಳನ್ನು ಕಟ್ಟಿಕೊಂಡಿದ್ದರು. ಪ್ರೀತಿಯಿಂದ ಕಟ್ಟಿಕೊಂಡಿದ್ದ ಮನೆಯಲ್ಲಿ ತಮ್ಮ ಪ್ರೀತಿ ಪಾತ್ರರೊಂದಿಗೆ ಇನ್ನುಳಿದ ಜೀವನದ ಕ್ಷಣಗಳನ್ನು ಕಳೆಯಲು ಇಚ್ಛಿಸಿದ್ದರು. ತಮ್ಮ ಬಳಿಕ ತಮ್ಮ ಪುತ್ರ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಬಯಸಿದ್ದರು. ಪಳನಿಯವರು ಕಟ್ಟಿದ್ದ ಕನಸಿನ ಮನೆಗೆ 15 ದಿನಗಳ ಹಿಂದಷ್ಟೇ ಅವರ ಕುಟುಂಬ ಗೃಹಪ್ರವೇಶ ಮಾಡಿತ್ತು. ಆದರೆ, ಇಂತಹದ್ದೊಂದು ದುರ್ಘಟನೆ ಸಂಭವಿಸುತ್ತದೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ. 

ಪಳನಿಯವರು ಇದೀಗ ತಮ್ಮ ಪತ್ನಿ ವಸಂತಿ ದೇವಿ (35), 10 ವರ್ಷದ ಪುತ್ರ ಹಾಗೂ 8 ವರ್ಷದ ಪುತ್ರಿಯನ್ನು ಅಗಲಿದ್ದಾರೆ. 

ರಾಮನಾಥಪುರಂ ಜಿಲ್ಲೆಯ ಕಡುಕ್ಕುಲರ್ ಎಂಬ ಪ್ರದೇಶದ ಮೂಲದವರಾಗಿದ್ದ ಪಳನಿಯವರು 18 ವರ್ಷದ ಯುವಕನಾಗಿದ್ದಾಗಲೇ ಸೇನೆಗೆ ಸೇರ್ಪಡೆಗೊಂಡಿದ್ದರು. ಬಡಕುಟುಂಬದಲ್ಲಿ ಬೆಳೆದಿದ್ದ ಪಳನಿಯವರು ಕುಟುಂಬವನ್ನು ಉನ್ನತ ಮಟ್ಟಗೇರಿಸುವ ನಿಟ್ಟಿನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದ್ದರು. ರಜಾದಿನಗಳಲ್ಲಿ ಮನೆಗೆ ಬರುತ್ತಿದ್ದ ಪಳನಿ ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಳ ಕಳೆಯುತ್ತಿದ್ದರು. ಚಿಕ್ಕಮಕ್ಕಳೊಂದಿಗೆ ಆಟವಾಡುತ್ತಿದ್ದರು. ಅವರೇ ಸ್ವತಃ ಅಡುಗೆಯನ್ನೂ ಮಾಡುತ್ತಿದ್ದರು ಎಂದು ಸಂಬಂಧಿಕರು ಸಂತಸದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

ರಾಮನಾಥಪುರಂ ಜಿಲ್ಲೆಯ ಕಡುಕ್ಕುಲರ್ ಎಂಬ ಪ್ರದೇಶದ ಮೂಲದವರಾಗಿದ್ದ ಪಳನಿಯವರು 18 ವರ್ಷದ ಯುವಕನಾಗಿದ್ದಾಗಲೇ ಸೇನೆಗೆ ಸೇರ್ಪಡೆಗೊಂಡಿದ್ದರು. ಬಡಕುಟುಂಬದಲ್ಲಿ ಬೆಳೆದಿದ್ದ ಪಳನಿಯವರು ಕುಟುಂಬವನ್ನು ಉನ್ನತ ಮಟ್ಟಗೇರಿಸುವ ನಿಟ್ಟಿನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದ್ದರು. ರಜಾದಿನಗಳಲ್ಲಿ ಮನೆಗೆ ಬರುತ್ತಿದ್ದ ಪಳನಿ ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಳ ಕಳೆಯುತ್ತಿದ್ದರು. ಚಿಕ್ಕಮಕ್ಕಳೊಂದಿಗೆ ಆಟವಾಡುತ್ತಿದ್ದರು. ಅವರೇ ಸ್ವತಃ ಅಡುಗೆಯನ್ನೂ ಮಾಡುತ್ತಿದ್ದರು ಎಂದು ಸಂಬಂಧಿಕರು ಸಂತಸದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

ತಮ್ಮ ಸೋದರನಿಗೆ ಶಿಕ್ಷಣ ಕೊಡಿಸಲು ಹಾಗೂ ಸಹೋದರಿಗೆ ವಿವಾಹ ಮಾಡಲು ಪಳನಿಯವರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಪಳನಿಯವರ ಸಹೋದರ ಕೂಡ ಸೇನೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ರಾಜಸ್ತಾನದಲ್ಲಿ ಪಳನಿಯವರ ಸಹೋದರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದ್ವಿತೀಯ ಪಿಯುಸಿ ಉತ್ತೀರ್ಣರಾಗುತ್ತಿದ್ದಂತೆಯೇ ಪಳನಿಯವರು ಸೇನೆ ಸೇರ್ಪಡೆಗೊಂಡಿದ್ದರು. ಬಳಿಕ ಸೇನೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಸಮಯದಲ್ಲಿಯೇ ಬಿಎ (ಇತಿಹಾಸ) ಪದವಿ ಮಾಡಿಕೊಂಡಿದ್ದರು. ಬಳಿಕ ಪತ್ನಿ ಕೂಡ ಬಿಎಡ್ ಮಾಡಿಕೊಳ್ಳಲು ಪ್ರೋತ್ಸಾಹ ನೀಡಿದ್ದರು. ಜೂನ್.3ರಂದಷ್ಟೇ ಪಳನಿಯವರ ಕನಸಿನ ಮನೆಗೆ ಗೃಹಪ್ರವೇಶ ಮಾಡಿದ್ದರು. ಜನವರಿ ಬಳಿಕ ಪಳನಿಯವರೂ ಕೂಡ ಕುಟುಂಬಸ್ಥರೊಂದಿಗಿರಲು ಬರಲಿದ್ದರು. ಅಷ್ಟರಲ್ಲಾಗಲೇ ಚೀನಾದ ದಾಳಿಗೆ ಪಳನಿಯವರು ಬಲಿಯಾಗಿದ್ದು, ಈ ಎಲ್ಲಾ ಕನಸುಗಳಿಗೆ ತಣ್ಣೀರು ಎರಚಿದಂತಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ": ಇರಾನ್ ಯುದ್ಧದ ಬಗ್ಗೆ ಟ್ರಂಪ್​ಗೆ ಮ್ಯಾಕ್ರನ್ ಮಂಗಳಾರತಿ!

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದಲ್ಲಿ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

ಪಶ್ಚಿಮ ಏಷ್ಯಾ ಯುದ್ಧದ ಪರಿಸ್ಥಿತಿ ನಿರ್ವಹಣೆ: ಮೋದಿ ಸರ್ಕಾರವನ್ನು ಹಾಡಿ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ; ಪಕ್ಷಕ್ಕೆ ತೀವ್ರ ಮುಜುಗರ!

"ಸೇನಾ ದಾಳಿ ಮಾರ್ಗದಿಂದ...": ಇರಾನ್ ನ್ನು ಶಿಲಾಯುಗಕ್ಕೆ ಅಟ್ಟುವ ಟ್ರಂಪ್ ಬೆದರಿಕೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ...

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಚೀನಾದ ಹಸ್ತಕ್ಷೇಪ: ಪನಾಮ ಧ್ವಜದ ಹಡಗುಗಳಿಗೆ ತಡೆ, ಸಿಡಿದೆದ್ದ ಅಮೆರಿಕ!

SCROLL FOR NEXT