2019 ಮಹಾರಾಷ್ಟ್ರ ಪ್ರವಾಹ: ಕರ್ನಾಟಕದಿಂದ ಹೆಚ್ಚಿನ ಹಾನಿಯಾಗಿಲ್ಲ-ತಜ್ಞರ ಸಮಿತಿ 
ದೇಶ

2019 ಮಹಾರಾಷ್ಟ್ರ ಪ್ರವಾಹ: ಕರ್ನಾಟಕದಿಂದ ಹೆಚ್ಚಿನ ಹಾನಿಯಾಗಿಲ್ಲ-ತಜ್ಞರ ಸಮಿತಿ

2019 ರಲ್ಲಿ ಮಹಾರಾಷ್ಟ್ರ ಪ್ರವಾಹಕ್ಕೆ ಕರ್ನಾಟಕದ ಆಲಮಟ್ಟಿ ಹಾಗೂ ಹಿಪ್ಪರಗಿ ಜಲಾಶಯಗಳು ಹಾಗೂ ಅಲ್ಲಿನ ಪ್ರವಾಹ ನಿರ್ವಹಣೆ ಕಾರ್ಯಾಚರಣೆಗಳು ಹೆಚ್ಚಿನ ಹಾನಿಯುಂಟುಮಾಡಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ.

2019 ರಲ್ಲಿ ಮಹಾರಾಷ್ಟ್ರ ಪ್ರವಾಹಕ್ಕೆ ಕರ್ನಾಟಕದ ಆಲಮಟ್ಟಿ ಹಾಗೂ ಹಿಪ್ಪರಗಿ ಜಲಾಶಯಗಳು ಹಾಗೂ ಅಲ್ಲಿನ ಪ್ರವಾಹ ನಿರ್ವಹಣೆ ಕಾರ್ಯಾಚರಣೆಗಳು ಹೆಚ್ಚಿನ ಹಾನಿಯುಂಟುಮಾಡಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ.

ಮಹಾರಾಷ್ಟ್ರದಲ್ಲಿ ಈ ಹಿಂದಿದ್ದ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಈ ತಜ್ಞರ ಸಮಿತಿಯನ್ನು ನೇಮಕ ಮಾಡಿತ್ತು.
ಮಾಜಿ ಹಿರಿಯ ಅಧಿಕಾರಿ ನಂದಕುಮಾರ್ ವಡ್ನೆರೆ ಹಾಗೂ ಹಾಲಿ ಹಿರಿಯ ಅಧಿಕಾರಿ ರಾಜೇಂದ್ರ ಪವಾರ್ ಅವರಿದ್ದ ಸಮಿತಿ ಈಗ ವರದಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, 3 ಸಂಪುಟಗಳಷ್ಟು ಅಧ್ಯಯನ ವರದಿಯನ್ನು ಸಲಿಸಿದ್ದು, ಮಹಾರಾಷ್ಟ್ರದ ಪ್ರವಾಹ ಪರಿಸ್ಥಿತಿಯ ಮೇಲೆ ಕರ್ನಾಟಕದ ಆಲಮಟ್ಟಿ ಹಾಗೂ ಹಿಪ್ಪರಗಿ ಜಲಾಶಯಗಳು ಹಾಗೂ ಅಲ್ಲಿನ ಪ್ರವಾಹ ನಿರ್ವಹಣೆ ಕಾರ್ಯಾಚರಣೆಗಳು ಹೆಚ್ಚಿನ ಹಾನಿಯುಂಟುಮಾಡಿಲ್ಲ ಎಂದು ಹೇಳಿದೆ. 

ಸಂಗ್ಲಿ, ಕೊಲ್ಹಾಪುರ ಅದರ ಸುತ್ತಮುತ್ತಲಿನ ಪ್ರದೇಶಗಳು ನೀರಿನಲ್ಲಿ ಮುಳುಗಿ ಜನಜೀವನ ಸಂಕಷ್ಟಕ್ಕೆ ಸಿಲುಕಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಯಕರು ಕರ್ನಾಟಕ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದ ಆಲಮಟ್ಟಿ ಜಲಾಶಯದಿಂದ ನೀರು ಹೊರಬಿಡುವಂತೆ ಮನವಿ ಮಾಡಿದ್ದರು. ಕರ್ನಾಟಕ ತನ್ನಲ್ಲಿದ್ದ ಬೃಹತ್ ಪ್ರಮಾಣದ ನೀರನ್ನು ಇಷ್ಟವಿಲ್ಲದಿದ್ದರೂ  ನಿರಂತರ ಮನವಿಯ ಪರಿಣಾಮವಾಗಿ ಹೊರಬಿಟ್ಟಿತ್ತು.

ಮಹಾರಾಷ್ಟ್ರದ ಪ್ರವಾಹ ಸ್ಥಿತಿಯ ಬಗ್ಗೆ 426 ಪುಟಗಳ ವರದಿ ಸಲ್ಲಿಸಿರುವ ಇಎಸ್ ಸಿ ಮಹಾರಾಷ್ಟ್ರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಕರ್ನಾಟಕ ಹೊಣೆಯಲ್ಲ ಎಂದು ಹೇಳಿದ್ದು, ಮಹಾರಾಷ್ಟ್ರದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ವೇಳೆ ಕೃಷ್ಣ, ಭೀಮ ಹಾಗೂ ಇತರ ನದಿ ಕಣಿವೆ ಪ್ರದೇಶಗಳಲ್ಲಿ ಹಾಗೂ ಪಶ್ಚಿಮ ಹಾಗೂ ದಕ್ಷಿಣ ಭಾಗಗಳಲ್ಲಿ ನಡೆದಿರುವ ಅತಿಕ್ರಮಣ ಪ್ರವಾಹದಿಂದ ಹೆಚ್ಚಿನ ಹಾನಿ ಉಂಟಾಗಲು ಕಾರಣವಾಗಿರುವ ಅಂಶಗಳಲ್ಲಿದೆ ಎಂದು ಸಮಿತಿಯ ವರದಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT