ನವದೆಹಲಿ: ಲಡಾಖ್'ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಭೀಕರವಾಗಿ ಹಲ್ಲೆ ನಡೆಸಿದ್ದು, ಈ ವೇಳೆ ಚೀನಾ ಯೋಧರು ಮೊಳೆಗಳುಳ್ಳ ರಾಡ್ ಬಳಸಿ ಭೀಕರವಾಗಿ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಈ ಕುರಿತು ರಕ್ಷಣಾ ವಿಶ್ಲೇಷಕರೊಬ್ಬರು ಹಂಚಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಕ್ಷಣಾ ವಿಶ್ಲೇಷಕ ಅಜಯ್ ಶುಕ್ಲಾ ಎಂಬುವವರು ಈ ಫೋಟೋವನ್ನು ಹಂಚಿಕೊಂಡಿದ್ದು, ಚೀನಾ ಯೋಧರ ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಲಡಾಖ್ ಬಳಿ ಚೀನಾ ಹಾಗೂ ಭಾರತೀಯ ಯೋಧರ ನಡುವೆ ಭಾರೀ ಕಾಳಗವೇ ನಡೆದಿದ್ದು, ಚೀನಾ ಯೋಧರು ಗಡಿಯಲ್ಲಿ ಹತ್ಯಾಕಾಂಡವನ್ನೇ ನಡೆಸಿದ್ದಾರೆ. ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಭಾರೀ ಸದ್ದು ಮಾಡುತ್ತಿದೆ.
ಈ ನಡುವೆ ಉಭಯ ದೇಶಗಳ ಮೇಜರ್ ಜನರಲ್ ಗಳು ನಿನ್ನೆಯಷ್ಟೇ ಮಾತುಕತೆ ನಡೆಸಿದ್ದು, ಮೇಲ್ನೋಟಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಒಳಗೊಳಗೆ ಯೋಧರು ಅಗ್ನಿಕುಂಟದಂತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ರಾಡ್ ಬಳಸಿ ದಾಳಿ ನಡೆಸುವ ಕುತಂತ್ರ ಬುದ್ಧಿ ಇಷ್ಟು ದಿನ ಪಾಕಿಸ್ತಾನ ನಡೆಸುತ್ತಿತ್ತು. ಆದರೆ, ಇದೀಗ ಪಾಕಿಸ್ತಾನ ಸೇನೆಯ ಬ್ಯಾಟ್ ಪಡೆಯನ್ನು ಚೀನಾ ಯೋಧರೂ ಕೂಡ ಅನುಸರಿಸಿದ್ದಾರೆಂದು ಹೇಳಲಾಗುತ್ತಿದೆ.