ದೇಶ

ರಾಜ್ಯಸಭಾ ಚುನಾವಣೆ: ಕೋವಿಡ್-19 ಸೋಂಕಿತ ಕಾಂಗ್ರೆಸ್ ಶಾಸಕ ಮತ ಚಲಾವಣೆ, ವಿಧಾನಸಭೆ ಆವರಣಕ್ಕೆ ಸ್ಯಾನಿಟೈಸರ್ ಸಿಂಪಡಣೆ 

Nagaraja AB

ಭೂಪಾಲ್: ಮಧ್ಯಪ್ರದೇಶದಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ  ಕೋವಿಡ್-19 ಸೋಂಕಿತ ಕಾಂಗ್ರೆಸ್ ಶಾಸಕರೊಬ್ಬರು ಪಿಪಿಇ ರಕ್ಷಾ ಕವಚದೊಂದಿಗೆ ರಾಜ್ಯ ವಿಧಾನಸಭೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. 

ಸೋಂಕಿತ ಶಾಸಕ ಮತ ಚಲಾಯಿಸಿ  ತೆರಳಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ವಿಧಾನಸಭೆ ಆವರಣವನ್ನು ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಸ್ವಚ್ಛಗೊಳಿಸಲಾಗಿದೆ.

ಬೆಳಗ್ಗೆಯಿಂದಲೂ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸೇರಿದಂತೆ ಹಲವು ಮಂದಿ ಮತ ಚಲಾಯಿಸಿದ್ದಾರೆ.

SCROLL FOR NEXT