ಮುಖ್ಯಮಂತ್ರಿ ಉದ್ಧವ್ ಠಾಕ್ರೆ 
ದೇಶ

ಗಲ್ವಾನ್ ಸಂಘರ್ಷ: ಚೀನಾ ಸಂಸ್ಥೆಗಳೊಂದಿಗಿನ 5,000 ಕೋಟಿ ರೂ. ಮೊತ್ತದ 3 ಒಪ್ಪಂದಕ್ಕೆ 'ಮಹಾ' ಸರ್ಕಾರ ತಡೆ!

20 ಭಾರತೀಯ ಯೋಧರ ಸಾವಿಗೆ ಕಾರಣವಾದ ಗಲ್ವಾನ್ ಸಂಘರ್ಷದ ನಡುವೆಯೂ ಚೀನಾ ಮೂಲದ ಸಂಸ್ಥೆಗಳೊಂದಿಗೆ 5 ಸಾವಿರ ಕೋಟಿ ರೂ ಗಳ ಹೂಡಿಕೆ ಒಪ್ಪಂದ ಮಾಡಿಕೊಂಡು ಟೀಕೆ ಎದುರಿಸುತ್ತಿದ್ದ ಮಹಾರಾಷ್ಟ್ರ ಸರ್ಕಾರ ಕೊನೆಗೂ ಎಚ್ಚೆತ್ತಿದು, ಯೋಜನೆಗಳಿಗ ತಡೆ ನೀಡಿದೆ.

ಮುಂಬೈ: 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಗಲ್ವಾನ್ ಸಂಘರ್ಷದ ನಡುವೆಯೂ ಚೀನಾ ಮೂಲದ ಸಂಸ್ಥೆಗಳೊಂದಿಗೆ 5 ಸಾವಿರ ಕೋಟಿ ರೂ ಗಳ ಹೂಡಿಕೆ ಒಪ್ಪಂದ ಮಾಡಿಕೊಂಡು ಟೀಕೆ ಎದುರಿಸುತ್ತಿದ್ದ ಮಹಾರಾಷ್ಟ್ರ ಸರ್ಕಾರ ಕೊನೆಗೂ ಎಚ್ಚೆತ್ತಿದು, ಯೋಜನೆಗಳಿಗ ತಡೆ ನೀಡಿದೆ.

ಹೌದು.. ಮಹಾರಾಷ್ಟ್ರ ಸರ್ಕಾರ ಚೀನಾದ ಸಂಸ್ಥೆಗಳ ಜೊತೆ ಮಾಡಿಕೊಂಡಿದ್ದ ಸುಮಾರು 5000 ಕೋಟಿಯ ಮೂರು ಒಪ್ಪಂದಗಳಿಗೆ ತಡೆ ನೀಡಿದೆ. ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ತಿಳಿಸಿದ್ದಾರೆ. ಅಲ್ಲದೇ ವಿದೇಶಾಂಗ ಸಚಿವಾಲಯ ಚೀನಾದ ಸಂಸ್ಥೆಗಳೊಂದಿಗೆ ಮುಂದಿನ ದಿನಗಳಲ್ಲಿ ಯಾವುದೇ ಒಡಂಬಡಿಕೆ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ ಎಂದೂ ಸಚಿವರು ತಿಳಿಸಿದ್ದಾರೆ.

ಕೊರೋನಾ ಬಳಿಕದ ಆರ್ಥಿಕ ಪುನಶ್ಚೇತನಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮ್ಯಾಗ್ನೇಟಿಕ್‌ ಮಹಾರಾಷ್ಟ್ರ 2.0 ಅಭಿಯಾನ ಆರಂಭಿಸಿತ್ತು. ಇದರ ಅಡಿಯಲ್ಲಿ ಚೀನಾದ ಹೆಂಗ್ಲಿ ಇಂಜಿನಿಯರಿಂಗ್‌, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್‌ ಜೆವಿ ಮತ್ತು ಫೋಟಾನ್‌, ಗ್ರೇಟ್‌ ಮೋಟಾರ್‌ನೊಂದಿಗೆ ಜೂ.17ರಂದು ಪುಣೆಯ ತಲೆಗಾಂವ್‌ನಲ್ಲಿ ಹೂಡಿಕೆ ಸಂಬಂಧ ಮೂರು ಒಪ್ಪಂದಗಳನ್ನ ಮಾಡಿಕೊಂಡಿತ್ತು. ಇದೀಗ ಈ ಒಪ್ಪಂದಕ್ಕೆ ಮಹಾ ವಿಕಾಸ ಅಘಾಡಿ ಸರ್ಕಾರ ತಡೆ ನೀಡಿದೆ.

ಇತ್ತೀಚೆಗೆ ಲಡಾಕ್‌ನ ಗ್ವಲಾನ್‌ ಗಡಿಯಲ್ಲಿ ಚೀನಾದ ಸೈನಿಕರು ಕುತಂತ್ರದಿಂದ ನಮ್ಮ 20 ಸೈನಿಕರನ್ನ ಕೊಂದಿದ್ದರು. ಇದಕ್ಕೆ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಭಾರತ ಸರ್ಕಾರ ಕೂಡ ಚೀನಿಗಳ ಕುಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿತ್ತು. ಈ ಘಟನೆ ನಡೆದ ಬೆನ್ನಲ್ಲೆ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ಗೆ ಚೀನಾದೊಂದಿಗೆ ಒಪ್ಪಂದಗಳನ್ನ ರದ್ದುಗೊಳಿಸುವಂತೆ ಸೂಚಿಸಿತ್ತು. 

ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಚೀನಾ ಮೂಲದ ಇತ್ತೀಚೆಗೆ ವಿಶ್ವದ 12 ಸಂಸ್ಛೆಗಳೊಂದಿಗೆ ಎಒಯುಗೆ ಸಹಿ ಹಾಕಿದ್ದು. ಈ ಪೈಕಿ ಚೀನಾ ಮೂಲದ ಮೂರು ಸಂಸ್ಥೆಗಳು ಕೂಡ ಸೇರಿವೆ. ಚೀನಾದ ಈ ಮೂರು ಸಂಸ್ಥೆಗಳು ಮಹಾರಾಷ್ಟ್ರದಲ್ಲಿ ಸುಮಾರು 5 ಸಾವಿರ ಕೋಟಿ ರೂ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿವೆ. ಹೆಂಗ್ಲಿ ಎಂಜಿನಿಯರಿಂಗ್, ಫೋಟಾನ್ ಮತ್ತು ಗ್ರೇಟ್ ವಾಲ್ ಮೋಟಾರ್ಸ್‌, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್ಸ್ ಜೆ.ವಿ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. 

ಫೋಟಾನ್‌ ಮತ್ತು ಗ್ರೇಟ್‌ ಮೋಟಾರ್‌-3,770 ಕೋಟಿ ರೂ ಹೂಡಿಕೆ ಮಾಡಿದ್ದು, ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್‌ ಜೆವಿ ಮತ್ತು ಫೋಟಾನ್‌-1,000 ಕೋಟಿ ಮತ್ತು ಹೆಂಗ್ಲಿ ಇಂಜಿನಿಯರಿಂಗ್‌ -250 ಕೋಟಿ  ರೂ ಹೂಡಿಕೆ ಮಾಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT