ದೇಶ

ಮುಂಬೈನಲ್ಲಿ ಮತ್ತೆ 1144 ಹೊಸ ಕೊರೋನಾ ಸೋಂಕು ಪ್ರಕರಣ, ಸೋಂಕಿತರ ಸಂಖ್ಯೆ 69,625ಕ್ಕೆ ಏರಿಕೆ

Srinivasamurthy VN

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಗಳಿಸಿರುವ ಮುಂಬೈ ಮಹಾನಗರಿಯಲ್ಲಿ ನಿನ್ನೆ 1144 ಹೊಸ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಮುಂಬೈನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 69,625ಕ್ಕೆ ಏರಿಕೆಯಾಗಿದೆ. 

ಬೃಹನ್ ಮುಂಬೈ ಮಹಾನಗರ ಪಾಲಿಕೆ ಈ ಬಗ್ಗೆ ಮಾಹಿತಿ ನೀಡಿದ್ದು, ನಿನ್ನೆ ಒಂದೇ ದಿನ ಮುಂಬೈನಲ್ಲಿ 1144 ಹೊಸ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಮುಂಬೈನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 69,625ಕ್ಕೆ ಏರಿಕೆಯಾಗಿದೆ. ಈ ಪೈಕಿ 37,010ಸೋಂಕಿತರು ಗುಣಮುಖರಾಗಿದ್ದು. 28,653  ಸಕ್ರಿಯ ಪ್ರಕರಣಗಳಿವೆ. 

ಇನ್ನು ನಿನ್ನೆ 38 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಮುಂಬೈನಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3,962ಕ್ಕೆ ಏರಿಕೆಯಾಗಿದೆ ಎಂದು ಬಿಎಂಸಿ ಮಾಹಿತಿ ನೀಡಿದೆ.

ಧಾರಾವಿಯಲ್ಲಿ ಮತ್ತೆ 10 ಹೊಸ ಸೋಂಕು ಪ್ರಕರಣ
ಇನ್ನು ಏಷ್ಯಾದ ಅತೀ ದೊಡ್ಡ ಕೊಳಚೆ ಪ್ರದೇಶವೆಂದೇ ಹೇಳಲಾಗುವ ಮುಂಬೈನ ಧಾರಾವಿಯಲ್ಲಿ ನಿನ್ನೆ ಮತ್ತೆ 10 ಮಂದಿ ನಿವಾಸಿಗಳಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಆ ಮೂಲಕ ಧಾರಾವಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2199ಕ್ಕೆ ಏರಿಕೆಯಾಗಿದೆ. ಈ ಪೈಕಿ 1100 ಸೋಂಕಿತರು ಗುಣಮುಖರಾಗಿದ್ದು. 1018  ಸಕ್ರಿಯ ಪ್ರಕರಣಗಳಿವೆ. ಅಂತೆಯೇ ಇಲ್ಲಿ ಈ ವರೆಗೂ 81 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

SCROLL FOR NEXT