ದೇಶ

ಜಮ್ಮು-ಕಾಶ್ಮೀರ, ಜಾರ್ಖಂಡ್, ಚತ್ತೀಸ್ ಗಢಗಳಲ್ಲಿ ಮಾವೋವಾದಿಗಳಿಂದ ಸಶಸ್ತ್ರ ಸಂಘಟನೆಗೆ 14ರ ವಯಸ್ಸಿನ ಮಕ್ಕಳ ನೇಮಕ! 

Srinivas Rao BV

ನವದೆಹಲಿ: ಜಮ್ಮು-ಕಾಶ್ಮೀರ, ಜಾರ್ಖಂಡ್, ಚತ್ತೀಸ್ ಗಢಗಳಲ್ಲಿ ಮಾವೋವಾದಿ ಸಂಘಟನೆಗಳಿಂದ 14 ವರ್ಷದ ಮಕ್ಕಳನ್ನು ಸಶಸ್ತ್ರ ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಅಮೆರಿಕಾದ ಸರ್ಕಾರಿ ಇಲಾಖೆ ವರದಿ ಪ್ರಕಟಿಸಿದೆ. 

ಭಾರತದಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಾಣಿಕೆ ಕುರಿತು ವರದಿ ಪ್ರಕಟಿಸಿರುವ ಅಮೆರಿಕದ ರಾಜ್ಯ ಇಲಾಖೆ ಸರ್ಕಾರೇತರ ಸಶಸ್ತ್ರ ಸಂಘಟನೆಗಳು ಭಾರತದಲ್ಲಿ 14 ವರ್ಷ ವಯಸ್ಸಿನ ಮಕ್ಕಳನ್ನು ಸೇರಿಸಿಕೊಳ್ಳುತ್ತಿದ್ದು, ಜಮ್ಮು-ಕಾಶ್ಮೀರದಲ್ಲಿ ಸರ್ಕಾರದ ವಿರುದ್ಧದ ನೇರ ಯುದ್ಧಗಳಲ್ಲಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದೆ.  

ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪೋಂಪಿಯೋ ಈ ವರದಿಯನ್ನು ಬಿಡುಗಡೆ ಮಾಡಿದ್ದು, ಮಾವೋವಾದಿಗಳು ಮುಖ್ಯವಾಗಿ ಚತ್ತೀಸ್ ಗಢ, ಜಾರ್ಖಂಡ್ ಗಳಲ್ಲಿ 12-14 ವರ್ಷದ ಯುವಕ/ಯುವತಿಯರನ್ನು ಒತ್ತಾಯಪೂರ್ವಕವಾಗಿ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದು, ಶಸ್ತ್ರಾಸ್ತ್ರಗಳ ನಿರ್ವಹಣೆ ಹಾಗೂ ಸುಧಾರಿತ ಸ್ಫೋಟಕ ಸಾಧನಗಳನ್ನು ನಿರ್ವಹಿಸುವ ತರಬೇತಿ ನೀಡುತ್ತಿದ್ದಾರೆ, ಕೆಲವೊಮ್ಮೆ ಮಾನವ ಗುರಾಣಿಗಳನ್ನಾಗಿಯೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.

ಮಾನವ ಕಳ್ಳ ಸಾಗಣೆ ತಡೆಗೆ ಭಾರತ 2019 ರಲ್ಲಿ ಗಮನಾರ್ಹ ಪ್ರಯತ್ನ ಮಾಡಿದೆ, ಆದರೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದು ಹೇಳಿರುವ ಅಮೆರಿಕ, ಮಾವೋವಾದಿಗಳ ಸಂಘಟನೆಗಳಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ  ಹಲವು ಮಹಿಳೆಯರನ್ನು, ಯುವತಿಯರು, ಮಾವೋವಾದಿಗಳ ಕ್ಯಾಂಪ್ ಗಳಲ್ಲಿ ಲೈಂಗಿಕ ಶೋಷಣೆ, ಗುಲಾಮಗಿರಿ ಅಸ್ತಿತ್ವದಲ್ಲಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದೆ.

SCROLL FOR NEXT