ದೇಶ

ಮಹಾರಾಷ್ಟ್ರದಲ್ಲಿ ಕಳೆದ 48 ಗಂಟೆಗಳಲ್ಲಿ 10 ಸಾವಿರ ಕೊರೋನಾ ಸೋಂಕು ವರದಿ:ಮುಂಬೈಯ ಅಂಧೇರಿ ಹಾಟ್ ಸ್ಪಾಟ್

Sumana Upadhyaya

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 5 ಸಾವಿರದ 318 ಹೊಸ ಪ್ರಕರಣಗಳು ವರದಿಯಾಗಿದ್ದು ಇದುವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 59 ಸಾವಿರದ 133 ಆಗಿದೆ.

ಕಳೆದ 48 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 86 ಮಂದಿ ಬಲಿಯಾಗಿದ್ದಾರೆ. ವಾಣಿಜ್ಯ ನಗರಿ ಮುಂಬೈಯಲ್ಲಂತೂ ಕೆಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು ಅಂಧೇರಿ ಹೊಸ ಹಾಟ್ ಸ್ಪಾಟ್ ಎನಿಸಿಕೊಂಡಿವೆ. 10 ಸಾವಿರಕ್ಕೂ ಅಧಿಕ ಹೊಸ ಕೇಸುಗಳು ವರದಿಯಾಗಿವೆ.

ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಕೊಳಚೆ ಪ್ರದೇಶವಾಗಿರುವ ಧಾರಾವಿಯಲ್ಲಿ ಇದುವರೆಗೆ 4 ಸಾವಿರದ 688 ಮಂದಿಗೆ ಕೊರೋನಾ ಸೋಂಕು ತಗುಲಿದೆ.

ಮುಂಬೈ ಮಹಾನಗರ ಪಾಲಿಕೆ ಅಂಕಿಅಂಶ ಪ್ರಕಾರ, ಅಂಧೇರಿ ಪೂರ್ವದಲ್ಲಿ ಒಟ್ಟು 5 ಸಾವಿರದ 97 ಹೊಸ ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 2 ಸಾವಿರದ 489 ಸಕ್ರಿಯ ಕೊರೋನಾ ಕೇಸುಗಳಾಗಿದ್ದು 2 ಸಾವಿರದ 295 ಮಂದಿ ಗುಣಮುಖರಾಗಿದ್ದಾರೆ. ಈ ಮಧ್ಯೆ ಅಂಧೇರಿ ಪಶ್ಚಿಮ ಭಾಗದಲ್ಲಿ ಒಟ್ಟು 4 ಸಾವಿರದ 252 ಕೇಸುಗಳಿವೆ. ಅವುಗಳಲ್ಲಿ 728 ಸಕ್ರಿಯ ಕೇಸುಗಳು ಮತ್ತು 2 ಸಾವಿರದ 343 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಅದರಲ್ಲೂ ಮುಂಬೈಯಲ್ಲಿ ಕೊರೋನಾ ಸೋಂಕು ಸಮುದಾಯ ಮಟ್ಟಕ್ಕೆ ಹಬ್ಬಿದೆಯೇ ಎಂದು ಪರೀಕ್ಷಿಸಲು ಸರ್ಕಾರ ಪ್ರತಿಯೊಬ್ಬರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ತಿಳಿಸಿದ್ದಾರೆ.

SCROLL FOR NEXT