ದೇಶ

ಗಲ್ವಾನ್ ಘರ್ಷಣೆ ಬಳಿಕ ಇಲ್ಲಿ ಚೀನಾ ಆಪ್ ಗಳಿಗೆ ನಿಷೇಧ; ಅಲ್ಲಿ ಭಾರತೀಯ ವಾರ್ತಾಪತ್ರಿಕೆ, ವೆಬ್ ಸೈಟ್ ಗಳಿಗೆ ನಿರ್ಬಂಧ!

Srinivas Rao BV

ನವದೆಹಲಿ: ಗಲ್ವಾನ್ ಕಣಿವೆ ಘರ್ಷಣೆಯ ನಂತರ ಭಾರತ ಸರ್ಕಾರ 59 ಚೀನಾ ಆಪ್ ಗಳನ್ನು ನಿಷೇಧಿಸಿದೆ. ಆದರೆ ಇದಕ್ಕೂ ಮುನ್ನ ಚೀನಾದಲ್ಲಿ ಭಾರತೀಯ ವಾರ್ತಾಪತ್ರಿಕೆ, ವೆಬ್ ಸೈಟ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ. 

ಸಂಘರ್ಷದ ಪರಿಸ್ಥಿತಿಯ ಹೊರತಾಗಿಯೂ ಭಾರತದಲ್ಲಿ ಚೀನಾದ ಪತ್ರಿಕೆಗಳು ಹಾಗೂ ವೆಬ್ ಸೈಟ್ ಗಳು ಭಾರತದಲ್ಲಿ ಮುಕ್ತವಾಗಿವೆ. ಆದರೆ ಚೀನಾದಲ್ಲಿ ಭಾರತೀಯ ಮಾಧ್ಯಮ ವೆಬ್ ಸೈಟ್ ಗಳನ್ನು ವರ್ಚ್ಯುಯಲ್ ಪ್ರೈವೆಟ್ ನೆಟ್ವರ್ಕ್ (ವಿಪಿಎನ್) ಸರ್ವರ್ ಗಳಲ್ಲಿ ಮಾತ್ರ ಬಳಕೆ ಮಾಡಬಹುದಾಗಿದೆ.  ಭಾರತೀಯ ಟಿವಿ ಚಾನಲ್ ಗಳನ್ನೂ ಸಹ ಐಪಿ ಟಿವಿಯ ಮೂಲಕವೇ ವೀಕ್ಷಿಸಬೇಕಾಗಿದೆ ಹಾಗೂ ಎಕ್ಸ್ ಪ್ರೆಸ್ ವಿಪೆನ್ ಸಹ ಕಳೆದ ಎರಡು ದಿನಗಳಿಂದ ಚೀನಾದಲ್ಲಿ ಐ ಫೋನ್ ಹಾಗೂ ಡೆಸ್ಕ್ ಟಾಪ್ ಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ.

ಇಂಟರ್ ನೆಟ್ ಬಳಕೆದಾರರಿಗೆ ಪ್ರೈವೆಸಿ ಲಭ್ಯತೆ ಇರಲಿದ್ದು ಐಪಿ ಅಡ್ರೆಸ್ ನ್ನು ಮರೆಮಾಚಿ ಗುರುತು, ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಡುವುದಕ್ಕೆ ವಿಪಿಎನ್ ಸಹಕರಿಸಲಿದೆ. ಆದರೆ ಚೀನಾದಲ್ಲಿ ವಿಪಿಎನ್ ಗಳನ್ನೂ ನಿರ್ಬಂಧಿಸುವ ತಂತ್ರಜ್ಞಾನವನ್ನೂ ಹೊಂದಿದೆ. ಚೀನಾ ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠವಾದ ಆನ್ ಲೈನ್ ಸೆನ್ಸಾರ್ಶಿಪ್ ನ್ನು ಹೊಂದಿದ್ದು, ಕಮ್ಯುನಿಸ್ಟ್ ಪಕ್ಷದ ವಿರುದ್ಧವಾದ ಸಂಗತಿಗಳನ್ನು ಹೊಂದಿರುವ ಯಾವುದೇ ಅಂಶಗಳನ್ನು ನಿರ್ಬಂಧಿಸಲಿದೆ. 

ನವೆಂಬರ್ ನಲ್ಲಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಟಿಸಿದ್ದ ವರದಿಯ ಪ್ರಕಾರ ಚೀನಾದಲ್ಲಿ ನಿರ್ಬಂಧಕ್ಕೆ ಒಳಗಾದ ವೆಬ್ ಸೈಟ್ ಗಳ ಸಂಖ್ಯೆ 10,000ಕ್ಕೆ ಏರಿಕೆಯಾಗಿದೆ. ಚೀನಾದಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ಗಳಿಗೆ ಹಾಗೂ ಬ್ಲೂಮ್ ಬರ್ಗ್, ವಾಲ್ ಸ್ಟ್ರೀಟ್ ಜರ್ನಲ್ ಹಾಗೂ ನ್ಯೂಯಾರ್ಕ್ ಟೈಮ್ಸ್ ನಂತಹ ಆನ್ ಲೈನ್ ಪತ್ರಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ.

SCROLL FOR NEXT