ದೇಶ

ಮೇಕ್ ಇನ್ ಇಂಡಿಯಾ ಯಶಸ್ಸು: ರಷ್ಯಾ, ಪೋಲ್ಯಾಂಡ್ ನ್ನು ಹಿಂದಿಕ್ಕಿ 40 ಮಿಲಿಯನ್ $ ಒಪ್ಪಂದ ಗಿಟ್ಟಿಸಿದ ಭಾರತ! 

Srinivas Rao BV

ನವದೆಹಲಿ: ರಷ್ಯಾ ಹಾಗೂ ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕಿ ಭಾರತ ಬರೊಬ್ಬರಿ 40 ಮಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದವನ್ನು ಗಿಟ್ಟಿಸಿಕೊಂಡಿದೆ. 

ದೇಶಿಯವಾಗಿ ಡಿಆರ್ ಡಿಒ ಹಾಗೂ ಬಿಇಎಲ್ ಸಂಸ್ಥೆಗಳು ತಯಾರಿಸಿರುವ ವೆಪನ್ ಲೊಕೇಟಿಂಗ್ ರಡಾರ್ (ಶಸ್ತ್ರಾಸ್ತ್ರ ಪತ್ತೆ ರೆಡಾರ್) ಗಳನ್ನು ಅರ್ಮೇನಿಯಾಗೆ ರಫ್ತು ಮಾಡಲ್ಪಿದೆ.
 
ಸ್ವಾತಿ ರಡಾರ್ ಗಳನ್ನು ಅರ್ಮೇನಿಯಾಗೆ ರಫ್ತು ಮಾಡುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಇದನ್ನು ಮೇಕ್ ಇನ್ ಇಂಡಿಯಾದ ಬಹುದೊಡ್ಡ ಯಶಸ್ಸು ಎಂದು ವಿಶ್ಲೇಷಿಸಲಾಗುತ್ತಿದೆ. ಅರ್ಮೇನಿಯನ್ನರು ರಷ್ಯಾ ಹಾಗೂ ಪೋಲ್ಯಾಂಡ್ ನ ರಡಾರ್ ಗಳನ್ನು ಪರೀಕ್ಷಿಸಿದ್ದರು. ಆದರೆ ಅಂತಿಮವಾಗಿ ಭಾರತೀಯ ರಡಾರ್ ಗಳನ್ನು ಖರೀದಿಸಲು ಮುಂದಾಗಿದ್ದಾರೆ. 

ಮಾರ್ಟಾರ್, ಶೆಲ್ ರಾಕೆಟ್ ಗಳಂತಹ ಶಸ್ತ್ರಾಸ್ತ್ರಗಳ ನಿಖರವಾಗಿ ಪತ್ತೆ ಮಾಡಿ 50- ಕಿ.ಮೀ ವ್ಯಾಪ್ತಿ ದೂರದಿಂದಲೇ ಗುರುತಿಸುವ ಸಾಮರ್ಥ್ಯವನ್ನು ಈ ರಡಾರ್ ಗಳು ಹೊಂದಿವೆ. ಭಾರತ ಸೇನೆ ಸಹ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಇದೇ ರಡಾರ್ ಗಳನ್ನು ಬಳಕೆ ಮಾಡುತ್ತಿದೆ. ರಕ್ಷಣಾ ಇಲಾಖೆ ಈಗ ಈ ರಡಾರ್ ಗಳ ಮಾರಾಟಕ್ಕೆ ಆಗ್ನೇಯ ಏಷ್ಯಾ, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ರಾಷ್ಟ್ರಗಳ ಮಾರುಕಟ್ಟೆಯ ಮೇಲೂ ಕಣ್ಣಿಟ್ಟಿದೆ. 

SCROLL FOR NEXT