ದೇಶ

ರೈಲು, ರೈಲ್ವೆ ಪ್ರದೇಶದಲ್ಲಿ 2 ವರ್ಷಕ್ಕೆ ವರದಿಯಾಗಿದ್ದು 160 ಅತ್ಯಾಚಾರ ಪ್ರಕರಣಗಳು!  

Srinivas Rao BV

ರೈಲ್ವೆ ಸುತ್ತಮುತ್ತಲ ಪ್ರದೇಶದಲ್ಲಿ 2017-19 ವರೆಗೆ 160 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ. 

ಆರ್ ಟಿಐ ಮೂಲಕ ಈ ಮಾಹಿತಿ ಲಭ್ಯವಾಗಿದ್ದು, 2017 ರಲ್ಲಿ 51 ಇದ್ದ ಪ್ರಕರಣಗಳು 2019 ರಲ್ಲಿ 44 ಕ್ಕೆ ಇಳಿಕೆಯಾಗಿದೆ ಆದರೆ 2018 ರಲ್ಲಿ ಮಾತ್ರ 70 ಕ್ಕೆ ಏರಿಕೆಯಾಗಿತ್ತು ಒಟ್ಟಾರೆ 2017-19 ರ ಅವಧಿಯಲ್ಲಿ 165 ಅತ್ಯಾಚಾರ ಪ್ರಕರಣಗಳು ರೈಲ್ವೆ ನಿಲ್ದಾಣಗಳ ಆಸುಪಾಸಿ ಎಂದು ನಿಮೂಚ್ ಮೂಲದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಆರ್ ಟಿಐ ಅರ್ಜಿಗೆ ಪ್ರತಿಕ್ರಿಯೆ ಬಂದಿದೆ. 

ಚಲಿಸುತ್ತಿರುವ ರೈಲಿನಲ್ಲಿ 10 ಪ್ರಕರಣಗಳು ವರದಿಯಾಗಿದೆ. ಅತ್ಯಾಚಾರಗಳನ್ನು ಹೊರತುಪಡಿಸಿ ಮಹಿಳೆಯರ ವಿರುದ್ಧ  ಅಪರಾಧಗಳು ನಡೆದಿರುವ 1,672 ಪ್ರಕರಣಗಳು ವರದಿಯಾಗಿದ್ದು, 802 ಪ್ರಕರಣಗಳು ರೈಲ್ವೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿದ್ದರೆ 870 ಪ್ರಕರಣಗಳು ರೈಲಿನಲ್ಲಿ ನಡೆದಿದೆ. 

SCROLL FOR NEXT