ದೇಶ

ಕರೋನಾ ವೈರಸ್: ಸರ್ಕಾರದಿಂದ ಹೊಸ ಸಲಹಾ ಪಟ್ಟಿ ಬಿಡುಗಡೆ, 4 ದೇಶಗಳಿಗೆ ವೀಸಾ ತಾತ್ಕಾಲಿಕ ರದ್ದು

Srinivas Rao BV

ಕರೋನಾ ವೈರಸ್ (ಸಿಒವಿಐಡಿ 19) ವಿಶ್ವಾದ್ಯಂತ ಹರಡುತ್ತಿದ್ದು, ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರ ಹೊಸ ಟ್ರಾವೆಲ್ ಅಡ್ವೈಸರಿ'ಯನ್ನು ಪ್ರಕಟಿಸಿದೆ. 

ಹಳೆಯ ಟ್ರಾವೆಲ್ ಅಡ್ವೈಸರಿಗಳನ್ನು ರದ್ದುಗೊಳಿಸಿ, ಮಾ.3 ರಂದು ಹೊರ ಅಡ್ವೈಸರಿಯನ್ನು ಪ್ರಕಟಿಸಿರುವ ಭಾರತ ಸರ್ಕಾರ 4 ರಾಷ್ಟ್ರಗಳಿಗೆ ನೀಡಲಾಗುತ್ತಿದ್ದ ವೀಸಾವನ್ನು ರದ್ದುಗೊಳಿಸಿದೆ. 

ಇದೇ ವೇಳೆ ಜಪಾನ್ ಹಾಗೂ ದಕ್ಷಿಣ ಕೊರಿಯಾದಿಂದ ಇನ್ನಷ್ಟೇ ಭಾರತಕ್ಕೆ ಬರಬೇಕಿದ್ದ ಅಲ್ಲಿನ ಪ್ರಜೆಗಳಿಗೆ ನೀಡಲಾಗುವ 'ವಿಸಾ ಆನ್‌ ಅರೈವಲ್‌' (ದೇಶಕ್ಕೆ ಭೇಟಿ ನೀಡಿದ ಬಳಿಕ ವಿಸಾ ಪಡೆಯುವ ಅವಕಾಶ) ಸೌಲಭ್ಯವನ್ನು ಅಮಾನತುಗೊಳಿಸಿದೆ.

ಬಲವಾದ ಕಾರಣಗಳಿಂದ ಭಾರತಕೆಕ್ ಆಗಮಿಸಬೇಕಿರುವವರು ಸ್ಥಳೀಯ ಭಾರತೀಯ ರಾಯಭಾರಿ ಕಚೆರಿಗೆ ತೆರಳಿ ಹೊಸ ವೀಸಾಗಳನ್ನು ಪಡೆಯಬಹುದಾಗಿದೆ ಎಂದು ಅಡ್ವೈಸರಿ ಹೇಳಿದೆ.

ಫೆ.5 ರಿಂದ ಚೀನಾದಿಂದ ಬರುವವರಿಗೆ ನೀಡಲಾಗುತ್ತಿದ್ದ ವಿಸಾಗಳು-ಇ-ವೀಸಾಗಳ ವಿತರಣೆಯನ್ನು ತೆಗೆದುಹಾಕಲಾಗಿತ್ತು. ಈಗ ಅದೇ ಸ್ಥಿತಿ ಮುಂದುವರೆಯಲಿದೆ ಎಂದು ಭಾರತ ಸರ್ಕಾರ ಹೇಳಿದೆ. 

ಇನ್ನು ಫೆ.1 ಅಥವಾ ಅದಕ್ಕಿಂತಲೂ ಮುನ್ನ ಚೀನಾ, ಇಟಾಲಿ, ದಕ್ಷಿಣ ಕೊರಿಯಾ, ಜಪಾನ್ ಗಳಿಗೆ ಭೇಟಿ ನೀಡಿದ, ಭಾರತಕ್ಕೆ ಇನ್ನೂ ಪ್ರವೇಶಿಸದ ವಿದೇಶಿ ಪ್ರಜೆಗಳ ವೀಸಾ ಇ-ವೀಸಾಗಳನ್ನೂ ಅಮಾನತು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ವಿಶ್ವಸಂಸ್ಥೆ ಅಧಿಕಾರಿಗಳು, ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು, ರಾಯಭಾರಿಗಳು ಒಸಿಐ ಕಾರ್ಡ್ ಹೊಂಡಿರುವವರು ಹಾಗೂ ಮೇಲ್ಕಂಡ ದೇಶಗಳ ವಿಮಾನ ಸಿಬ್ಬಂದಿಗಳಿಗೆ ವಿನಾಯಿತಿ ಇದೆ ಎಂದು ಹೊಸ ಅಡ್ವೈಸರಿ ತಿಳಿಸಿದ್ದು, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಇರಾನ್, ಇಟಾಲಿ, ಹಾಂಕ್ ಕಾಂಗ್, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಶ್ಯಾ, ನೇಪಾಳ, ಥಾಯ್ಲ್ಯಾಂಡ್, ಸಿಂಗಪೂರ್, ತೈವಾನ್ ಗಳಿಂದ ಬರುವ ವಿದೇಶಿ ಪ್ರಜೆಗಳು ಅಥವಾ ಭಾರತೀಯರು ಭಾರತ ಪ್ರವೇಶಿಸುವುದಕ್ಕೂ ಮುನ್ನ ವೈದ್ಯಕೀಯ ತಪಾಸಣೆಗೆ ಒಳಪಡಬೇಕೆಂದು ಸರ್ಕಾರ ಆದೇಶಿಸಿದೆ. 

SCROLL FOR NEXT