ದೇಶ

ಕಪಿಲ್ ಮಿಶ್ರಾಗೆ 'ವೈ'ದರ್ಜೆಯ ಭದ್ರತೆ; ಜೈಲಿನಲ್ಲಿರಬೇಕಾದವರಿಗೆ ಬಿಜೆಪಿಯಿಂದ ರಕ್ಷಣೆ ಎಂದು ಕಾಂಗ್ರೆಸ್ ಆರೋಪ 

Sumana Upadhyaya

ನವದೆಹಲಿ; ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾರಣರಾದವರು ಎಂದು ಆರೋಪಿಸಲ್ಪಟ್ಟ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರಿಗೆ 24*7 ಗಂಟೆಗಳ ವೈ ದರ್ಜೆಯ ಭದ್ರತೆ ನೀಡಲಾಗಿದೆ. ಕಪಿಲ್ ಮಿಶ್ರಾ ಅವರ ಜೀವಕ್ಕೆ ಅಪಾಯವಿದೆ ಎಂದು ಮನಗಂಡು ಅವರಿಗೆ ವೈ ದರ್ಜೆಯ ಭದ್ರತೆ ನೀಡಲಾಗಿದೆ. 6 ಮಂದಿ ಭದ್ರತಾ ಸಿಬ್ಬಂದಿ ಅವರನ್ನು ಹಗಲು ರಾತ್ರಿ ಕಾಯಲಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ಮೊದಲು ಕೋಮು ಗಲಭೆ ಸೃಷ್ಟಿಗೆ ಕಪಿಲ್ ಮಿಶ್ರಾ ಅವರ ಹೇಳಿಕೆಗಳೇ ಕಾರಣ, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೆದರಿಕೆಗಳು ಬರುತ್ತಿರುವುದರಿಂದ ತಮಗೆ ಭದ್ರತೆ ಒದಗಿಸಬೇಕೆಂದು ಕಪಿಲ್ ಮಿಶ್ರಾ ಕೇಳಿಕೊಂಡಿದ್ದರು. 

ಇವರಿಗೆ ನೀಡಿರುವ ಭದ್ರತೆ ಬಗ್ಗೆ ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ಲ್ ಪ್ರತಿಕ್ರಿಯಿಸಿ, ಮಿಶ್ರಾ ಅವರನ್ನು ಬಂಧಿಸುವ ಬದಲು ಬಿಜೆಪಿ ದ್ವೇಷ ಹರಡುವವರನ್ನು ರಕ್ಷಿಸುತ್ತಿದೆ. ಕಪಿಲ್ ಮಿಶ್ರಾ ಅವರನ್ನು ಬಂಧಿಸುವ ಬದಲು ವೈ ದರ್ಜೆಯ ಭದ್ರತೆ ನೀಡುತ್ತಿದ್ದಾರೆ. ಜೈಲಿನಲ್ಲಿರಬೇಕಾದ ವ್ಯಕ್ತಿಗೆ ಬಿಜೆಪಿ ರತ್ನಗಂಬಳಿ ಹಾಕಿ ರಕ್ಷಿಸುತ್ತಿದೆ, ಈ ಮೂಲಕ ತೆರಿಗೆದಾರರ ಹಣವನ್ನು ಬಿಜೆಪಿ ದುರುಪಯೋಗ ಮಾಡುತ್ತಿದೆ ಎಂದು ಶೆರ್ಗಿಲ್ಲ್ ಟ್ವೀಟ್ ಮಾಡಿದ್ದಾರೆ.

SCROLL FOR NEXT