ಸಂಗ್ರಹ ಚಿತ್ರ 
ದೇಶ

2014ರಿಂದ 15,000 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡಿದ ಮೋದಿ ಸರ್ಕಾರ

 2014 ರಿಂದೀಚೆಗೆ  15,036 ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐದು ನೆರೆರಾಷ್ಟ್ರಗಳ ಸುಮಾರು 19,000 ಜನರಿಗೆ ಭಾರತ ಪೌರತ್ವ ನೀಡಲಾಗಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. 

ನವದೆಹಲಿ: 2014 ರಿಂದೀಚೆಗೆ  15,036 ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐದು ನೆರೆರಾಷ್ಟ್ರಗಳ ಸುಮಾರು 19,000 ಜನರಿಗೆ ಭಾರತ ಪೌರತ್ವ ನೀಡಲಾಗಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

 ಬಾಂಗ್ಲಾದೇಶ, ಪಾಕಿಸ್ತಾನ, ಮಯನ್ಮಾರ್,  ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಕ್ಕೆ ಸೇರಿದ ನಾಗರಿಕರು ಭಾರತೀಯ ಪೌರತ್ವ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಹೇಳಿದರು.

ಭಾರತೀಯ ಪೌರತ್ವ ಪಡೆದ 18,999 ಜನರಲ್ಲಿ ಒಟ್ಟು 15,036 ಜನರು ಬಾಂಗ್ಲಾದೇಶದವರು ಎಂದು ಲಿಖಿತ ಉತ್ತರದಲ್ಲಿ ಅವರು ತಿಳಿಸಿದರು.

ಭಾರತ-ಬಾಂಗ್ಲಾಭೂ ಗಡಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ 2015 ರಲ್ಲಿ 14,864 ಬಾಂಗ್ಲಾದೇಶೀಯರಿಗೆ ಪೌರತ್ವ ನೀಡಲಾಗಿದೆ. ಇದರೊಡನೆ ಪೌರತ್ವ ಕಾಯ್ದೆ 1955 ರ ಸೆಕ್ಷನ್ 7 ರ ಅಡಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಬಾಂಗ್ಲಾದೇಶೀ .ನಾಗರಿಕರಿಗೆ ಭಾರತೀಯ ಪೌರತ್ವ ದೊರೆತಂತಾಗಿದೆ. 

2014 ರಿಂದ 2019 ರವರೆಗೆ ಒಟ್ಟು 2,935 ಪಾಕಿಸ್ತಾನಿ, 914 ಅಫಘಾನ್ ಮತ್ತು 113 ಶ್ರೀಲಂಕಾದ ನಾಗರಿಕರು ಮತ್ತು ಒಬ್ಬ ಮಯನ್ಮಾರ್ ಪ್ರಜೆಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ರೈ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT