ನಿರ್ಭಯಾ ಅಪರಾಧಿಗಳಿಗೆ ಗಲ್ಲು: ದೆಹಲಿ ನ್ಯಾಯಾಲಯದಿಂದ ನಾಳೆ ಹೊಸ ಡೆತ್ ವಾರಂಟ್ ಜಾರಿ 
ದೇಶ

ನಿರ್ಭಯಾ ಅಪರಾಧಿಗಳಿಗೆ ಗಲ್ಲು: ದೆಹಲಿ ನ್ಯಾಯಾಲಯದಿಂದ ನಾಳೆ ಹೊಸ ಡೆತ್ ವಾರಂಟ್ ಜಾರಿ

2012 ರ ಡಿಸೆಂಬರ್‌ನ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಹೊಸ ಡೆತ್ ವಾರಂಟ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು ನಾಳೆ ಮಧ್ಯಾಹ್ನ  2 ಗಂಟೆಗೆ ಈ ಸಂಬಂಧ ವಿಚಾರಣೆಗೆ ಕೋರ್ಟ್ ತೀರ್ಮಾನಿಸಿದೆ.

ನವದೆಹಲಿ: 2012 ರ ಡಿಸೆಂಬರ್‌ನ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಹೊಸ ಡೆತ್ ವಾರಂಟ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು ನಾಳೆ ಮಧ್ಯಾಹ್ನ  2 ಗಂಟೆಗೆ ಈ ಸಂಬಂಧ ವಿಚಾರಣೆಗೆ ಕೋರ್ಟ್ ತೀರ್ಮಾನಿಸಿದೆ.

ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅರ್ಜಿ ಕುರಿತು ಪ್ರತಿಕ್ರಿಯೆ ಕೋರಿ ಅಪರಾಧಿಗಳಿಗೆ ನೋಟಿಸ್ ನೀಡಿದ್ದಾರೆ

ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಇರ್ಫಾನ್ ಅಹ್ಮದ್, ಇಂದು ಮರಣದಂಡನೆಗೆ ಹೊಸ ದಿನಾಂಕವನ್ನು ನೀಡುವಂತೆ ಕೋರಿದ್ದರು. ಅಪರಾಧಿಗಳು ತಮಗೆ ಲಭ್ಯವಿರುವ ಎಲ್ಲಾ ಕಾನೂನು ಮಾರ್ಗಗಳನ್ನು ಸಹ ಬಳಸಿಕೊಂಡಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. "ಪವನ್ ಗುಪ್ತಾ ಅವರಿಗೆ ಲಭ್ಯವಿದ್ದ ಏಕೈಕ ಖಾನೂನು ಪರಿಹಾರ ಸಹ ಮುಗಿದಿದೆ. ಇನ್ನು ಯಾವ ಅಪರಾಧಿಗಳಿಗೆ ಯಾವುದೇ ಬಗೆಯ ಕಾನೂನಾತ್ಮಕ ಮಾರ್ಗಗಳು ಉಳಿದಿಲ್ಲ. ಹಾಗಾಗಿ , ದಯವಿಟ್ಟು ಇಂದು ಮರಣದಂಡನೆ ವಿಧಿಸಲು ಹೊಸ ದಿನಾಂಕವನ್ನು ನಿಗದಿಗೊಳಿಸಿ ಆದೇಶ ನೀಡಬೇಕು." ಎಂದು ಅವರು ಹೇಳಿದರು.

ಇದಕ್ಕೆ ಮುನ್ನ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಗುಪ್ತಾ ಅವರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಕೋವಿಂದ್ ವಜಾಗೊಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT