ದೇಶ

ಸಿಎಎ ಅವಶ್ಯಕವಾಗಿದೆ, ಮುಸ್ಲಿಮರನ್ನು ಭಾರತದಿಂದ ಹೊರಗೆ ಕಳುಹಿಸುವ ಉದ್ದೇಶ ಹೊಂದಿಲ್ಲ- ಹರೀಶ್ ಸಾಳ್ವೆ 

Nagaraja AB

ನವದೆಹಲಿ:  ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಎ ಅವಶ್ಯಕವಾಗಿದೆ, ಮುಸ್ಲಿಂರನ್ನು ಭಾರತದಿಂದ ಹೊರಗೆ ಕಳುಹಿಸುವ ಉದ್ದೇಶ ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಮಾನತೆ ಎಂದರೆ ಎಲ್ಲಾ ಕಾನೂನುಗಳು ಎಲ್ಲರಿಗೂ ಏಕರೂಪವಾಗಿರಬೇಕು ಎಂಬರ್ಥವಲ್ಲಾ,ಸಮಾನತೆಯ ತತ್ವವು ರಾಜ್ಯದಿಂದ ವರ್ಗೀಕರಣ ಮಾಡುವ ಶಕ್ತಿಯನ್ನು ಕಿತ್ತುಕೊಳ್ಳುವುದಕ್ಕೆ ಕಾರಣವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂರ ವಿರೋಧಿ ಎಂಬಂತೆ ಬಿಂಬಿಸುತ್ತಿರುವ ವಿರುದ್ದ ಕಿಡಿಕಾರಿರುವ ಹರೀಶ್ ಸಾಳ್ವೆ,  ಅಪ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದಿರುವ ಅಲ್ಪಸಂಖ್ಯಾತರಿಗೆ ಪೌರತ್ವ ಕಲ್ಪಿಸಲು ಸಿಎಎ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. 

ಸಿಎಎಯಿಂದ ಮುಸ್ಲಿಂರನ್ನು ಭಾರತದಿಂದ ಹೊರಗೆ ಕಳುಹಿಸುವ ಉದ್ದೇಶವನ್ನು ಸರ್ಕಾರ ಹೊಂದಿಲ್ಲ, ಧರ್ಮದ ಆಧಾರದ ಮೇಲೆ ವರ್ಗೀಕರಣವು ಅಸಂವಿಧಾನಿಕವಲ್ಲ, ಏಕೆಂದರೆ ಸಂವಿಧಾನವು ಭಾರತದಲ್ಲಿನ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಸದಸ್ಯರಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ. 

ದೇಶದ ಪೌರತ್ವವು ಪ್ರಸ್ತುತ ಬಹುತೇಕ ಎಲ್ಲ ದೇಶಗಳಲ್ಲಿ ಅನುಸರಿಸುತ್ತಿರುವ ಒಂದೇ ರೀತಿಯ ತತ್ವಗಳನ್ನು ಆಧರಿಸಿದೆ, ಇವುಗಳನ್ನು ಕಾನೂನಿನ ನಿಯಮದ ಮೂಲಕ ನಿಯಂತ್ರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT