ದೇಶ

ದೆಹಲಿ ಹಿಂಸಾಚಾರ: ಕೇಜ್ರಿವಾಲ್ ಸರ್ಕಾರ, ಪೊಲೀಸರಿಗೆ ಬಂಧಿತರ ಪಟ್ಟಿ ನೀಡಿ ಎಂದು ಕೋರ್ಟ್ ಆದೇಶ!

Vishwanath S

ನವದೆಹಲಿ: ದೆಹಲಿ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 53ಕ್ಕೆ ಏರಿಯಾಗಿದ್ದು ಇನ್ನು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಷ್ಟು ಮಂದಿಯನ್ನು ಬಂಧಿಸಿದ್ದೀರಿ ಅವರ ಪಟ್ಟಿ ನೀಡಿ ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. 

ಸಿಪಿಐ(ಎಂ) ಮುಖಂಡ ಬ್ರಿಂದಾ ಕರಾಟ್ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ ಎಷ್ಟು ಮಂದಿಯನ್ನು ಬಂಧಿಸಿದ್ದಾರೆ ಎಂಬ ಮಾಹಿತಿಗಾಗಿ ಪಿಐಎಲ್ ಸಲ್ಲಿಸಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಬಂಧಿತರ ಪಟ್ಟಿ ನೀಡುವಂತೆ ಕೇಜ್ರಿವಾಲ್ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಆದೇಶಿಸಿದ್ದಾರೆ.

ಫೆಬ್ರವರಿ 24ರಂದು ಸಿಎಎ ಪರ-ವಿರೋಧಿಗಳ ನಡುವೆ ಘರ್ಷಣೆ ನಡೆದಿತ್ತು. ನಂತರ ಭೀಕರ ಸ್ವರೂಪ ಪಡೆದ ಹಿಂಸಾಚಾರದಲ್ಲಿ ಬರೋಬ್ಬರಿ 48 ಮಂದಿ ಮೃತಪಟ್ಟಿದ್ದು 250ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. 92 ಗಂಟೆಗಳು ನಡೆದ ಹಿಂಸಾಚಾರದಲ್ಲಿ 92 ಮನೆಗಳು, 57 ಅಂಗಡಿ, 500 ವಾಹನಗಳು, 6 ಗೋಡಾನ್ ಗಳು, 2 ಶಾಲೆಗಳು, 4 ಫ್ಯಾಕ್ಟರಿಗಳು ಮತ್ತು 4 ಧಾರ್ಮಿಕ ಸ್ಥಳಗಳು ಬೆಂಕಿಗಾಹುತಿಯಾಗಿದ್ದವು.

SCROLL FOR NEXT