ದೇಶ

ಶಹೀನ್ ಬಾಗ್ ಶೂಟರ್ ಗೆ ದೆಹಲಿ ನ್ಯಾಯಾಲಯ ಜಾಮೀನು 

Raghavendra Adiga

ನವದೆಹಲಿ: ದೆಹಲಿಯ ಶಹೀನ್ ಬಾಗ್ ಪ್ರತಿಭಟನೆ ವೇಳೆ ಗುಂಡು ಹಾರಿಸಿದ್ದ ಶೂಟರ್ ಬೈಸಾಲಾ ಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಬೈಸಾಲಾ ಪರ ವಕೀಲರು ಮತ್ತು ಪೊಲೀಸರ ಪರ ವಾದಗಳನ್ನು ಆಲಿಸಿದನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

"ಸತ್ಯ ಮತ್ತು ಸನ್ನಿವೇಶಗಳಗಳನ್ನು ಪರಿಗಣಿಸಿ, ಆರೋಪಿ ಕಪಿಲ್ ಬೈಸಾಲಾ ಅವರಿಗೆ 25 ಸಾವಿರ ರೂ.ಗಳ ಬಾಂಡ್ ಮೇಲೆ  ಜಾಮೀನು ನೀಡಲಾಗಿದೆ."ಕೋರ್ಟ್ ಹೇಳಿದೆ.

ತನ್ನ ಕಕ್ಷಿದಾರ  ಸಮಾಜದಲ್ಲಿ ಆಳವಾದ ನಂಬಿಕೆಯನ್ನಿಟ್ಟಿದ್ದಾರೆ.ಹಾಗಾಗಿ ಅವರು ಕಾನೂನು ಮೀರಿ ಪರಾರಿಯಾಗುವುದಿಲ್ಲ ಎಂದು ಬೈಸಲಾ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.ಅಲ್ಲದೆ ಬೈಸಾಲಾ ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಪ್ರಕರಣದಲ್ಲಿ ಭಾಗಿಯಾದವರಲ್ಲ ಎಂದೂ ಅವರು ಹೇಳಿದ್ದಾರೆ."ಅರ್ಜಿದಾರನು ತನ್ನ ಹೆಂಡತಿ ಮತ್ತು ಅಪ್ರಾಪ್ತ ಮಗುವಿನ ಜವಾಬ್ದಾರಿಯನ್ನು ಹೊಂದಿದ್ದಾರೆ. ಅಲ್ಲದೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸುವುದರ ಮೂಲಕ ಯಾವುದೇ ಉದ್ದೇಶವನ್ನು ಪೂರೈಸಲಾಗುವುದಿಲ್ಲ" ಎಂದು ಅವರು ವಾದಿಸಿದ್ದರು. ಇದೇ ವೇಳೆ ಆರೋಪಿ ಬೈಸಾಲಾ ಜಾಮೀನು ಪಡೆಯುವುದನ್ನು ಪೋಲೀಸರು ಬಲವಾಗೊ ವಿರೋಧಿಸಿದ್ದರು. ಆತನ ಮೇಲಿನ ಆರೋಪ ಬಹಳ ಗಂಬೀರವಾಗಿದೆ ಹಾಗೂ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಅವರು ಹೇಳೀದ್ದಾರೆ.

ಫೆಬ್ರವರಿ 1 ರಂದು, ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಶಹೀನ್ ಬಾಗ್ ನಲ್ಲಿ ಬೈಸಲಾ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT