ಮೋದಿ 
ದೇಶ

ಕೊರೋನಾ ವೈರಸ್ ಭೀತಿ: ವದಂತಿಗಳಿಗೆ ಕಿವಿಗೊಡದಿರಿ- ಜನತೆಗೆ ಪ್ರಧಾನಿ ಮೋದಿ ಮನವಿ

ಕೊರೋನಾ ವೈರಸ್ ಭೀತಿ ಇಡೀ ವಿಶ್ವವನ್ನು ಆತಂಕಕ್ಕೀಡು ಮಾಡಿದ್ದು, ವದಂತಿಗಳಿಗೆ ಕಿವಿಗೊಡದಂತೆ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನವಿ ಮಾಡಿಕೊಂಡಿದ್ದಾರೆ. 

ನವದೆಹಲಿ: ಆರೋಗ್ಯ ವಲಯದಲ್ಲಿ ಎದುರಾಗಿರುವ  ಸವಾಲುಗಳನ್ನು ಅರ್ಥಮಾಡಿಕೊಂಡು ಪರಿಹರಿಸಲು ಸರ್ಕಾರ  ಸಮರೋಪಾದಿಯಲ್ಲಿ  ಕಾರ್ಯಪ್ರವೃತ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ  ಹೇಳಿದ್ದಾರೆ.

ಜನೌಷಧಿ ದಿವಸ್ ಅಂಗವಾಗಿ  ವಿಡಿಯೋಕಾನ್ಫರೆನ್ಸ್  ಮೂಲಕ ಬಾಷಣ ಮಾಡಿದ ಪ್ರಧಾನಿ,  ಪ್ರಸ್ತುತ  ಎದುರಾಗಿರುವ   ಆರೋಗ್ಯ  ಕುರಿತ  ಸವಾಲುಗಳನ್ನು ಆರ್ಥಮಾಡಿಕೊಂಡು,  ಅವುಗಳನ್ನು  ಪರಿಹರಿಸಲು  ನಾವು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತೀದ್ದೇವೆ. ಜನೌಷಧಿ ಪರಿಯೋಜನಾ ಮೂಲಕ  ದೇಶಾದ್ಯಂತ ಎಲ್ಲ ಭಾರತೀಯರಿಗೆ  ಅಗ್ಗದ ದರದಲ್ಲಿ  ಆರೋಗ್ಯ ರಕ್ಷಣೆ ಕಲ್ಪಿಸಲಾಗುತ್ತಿದೆ ಎಂದರು. ಪ್ರತಿಯೊಬ್ಬ  ಭಾರತೀಯನ ಆರೋಗ್ಯಕ್ಕಾಗಿ  ಸರ್ಕಾರ  ನಾಲ್ಕು ಉಪ ಶಿರ್ಷಿಕೆಯಡಿ  ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮೋದಿ  ಹೇಳಿದ್ದಾರೆ.

ಪ್ರತಿಯೊಬ್ಬ ಭಾರತೀಯನ ಆರೋಗ್ಯವನ್ನು   ನಾಲ್ಕು ಉಪ ಶೀರ್ಷಿಕೆಯಡಿ   ಸರ್ಕಾರ ಕಾರ್ಯ ಪ್ರವೃತ್ತವಾಗಿದ್ದು,   ಜನರನ್ನು ಅನಾರೋಗ್ಯದಿಂದ ಹೇಗೆ  ರಕ್ಷಿಸುವುದು?   ಒಂದೊಮ್ಮೆ ಅವರು ಅನಾರೋಗ್ಯಕ್ಕೆ ಒಳಗಾದರೆ,  ಅವರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಆರೋಗ್ಯ ರಕ್ಷಣೆ ಕಲ್ಪಿಸುತ್ತಿದ್ದೇವೆ,  ಅಗ್ಗದ ದರದಲ್ಲಿ  ಆಸ್ಪತ್ರೆ  ಹಾಗೂ ಗುಣ ಮಟ್ಟದ ಆರೋಗ್ಯ ರಕ್ಷಣೆ ಕಲ್ಪಿಸಲು ಪ್ರಯತ್ನಿಸುತ್ತೀದ್ದೇವೆ ಎಂದರು. ಜನೌಷಧಿ ಕೇಂದ್ರಗಳ ಮೂಲಕ  ದೇಶದಲ್ಲಿ  ಪ್ರತಿ ತಿಂಗಳು ೧ ಕೋಟಿ ಕುಟುಂಬಗಳು  ಅಗ್ಗದ ಬೆಲೆಯ  ಔಷಧಿಗಳ ಲಾಭಪಡೆದುಕೊಳ್ಳುತ್ತಿವೆ  ಎಂದು ಪ್ರಧಾನಿ ಹೇಳಿದ್ದಾರೆ.

ದೇಶದ ಮಾರುಕಟ್ಟಗಳಲ್ಲಿ ಲಭ್ಯವಿರುವ ಔಷಧಿಗಳಿಗೆ ಹೋಲಿಸಿದರೆ, ಜನೌಷಧಿ ಕೇಂದ್ರಗಳಲ್ಲಿ  ಶೇ ೫೦-೬೦ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುತ್ತಿವೆ. ಕ್ಯಾನ್ಸರ್   ಔಷಧಿ ಬೆಲೆ   ಮಾರುಕಟ್ಟೆಗಳಲ್ಲಿ  ೬,೫೦೦ ರೂಪಾಯಿಗಳಾಗಲಿದೆ. ಆದರೆ  ಜನೌಷಧಿ ಕೇಂದ್ರಗಳಲ್ಲಿ ಇದು ಕೇವಲ ೮೫೦ ರೂಪಾಯಿಗಳಿಗೆ  ದೊರೆಯುತ್ತಿದೆ ಎಂದರು. ಇದರಿಂದಾಗಿ  ಆರೋಗ್ಯ ರಕ್ಷಣೆಯ  ವೆಚ್ಚ ಗಮನಾರ್ಹವಾಗಿ  ಇಳಿಕೆಯಾಗಿದ್ದು, ಇದರಿಂದ ಕೋಟ್ಯಾಂತರ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ  ಪ್ರಯೋಜನವಾಗಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.

ದೇಶದಲ್ಲಿ  ಸುಮಾರು ೧೦೦೦ ಔಷಧಿಗಳ ಬೆಲೆಗಳನ್ನು ನಿಯಂತ್ರಿಸಲಾಗಿದೆ  ಇದರಿಂದ ದೇಶಾದ್ಯಂತ ಜನರಿಗೆ ಅನುಕೂಲವಾಗಿದೆ. ಸಾಮಾನ್ಯ ಜನರಿಗೆ ೧೨೫೦೦ಕೋಟಿರೂಪಾಯಿ ಉಳಿತಾಯವಾಗಿದೆ. ಆಯುಷ್ಮಾನ್ ಭಾರತ್  ಯೋಜನೆಯಡಿ  ಸುಮಾರು ೯೦ ಲಕ್ಷ  ಬಡವರಿಗೆ  ಉಚಿತ ಆರೋಗ್ಯ ರಕ್ಷಣೆ ಹಾಗೂ ಚಿಕಿತ್ಸೆ  ಕಲ್ಪಿಸಲಾಗಿದೆ ಎಂದು  ಎಂದು ಅಂಕಿ ಅಂಶ ನೀಡಿದರು. ವೈದ್ಯಕೀಯ ಸೌಲಭ್ಯಗಳಿಗಾಗಿ   ಜನರು ದೂರದ  ಸ್ಥಳಗಳಿಗೆ  ಹೋಗುವುದನ್ನು  ತಪ್ಪಿಸಲು   ಸರ್ಕಾರ  ಪ್ರಯತ್ನ  ನಡೆಸುತ್ತಿದ್ದು.  ದೇಶಾದ್ಯಂತ  ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಹೊಸ ಏಮ್ಸ್, ಹೊಸ ಆಸ್ಪತ್ರೆಗಳು   ಇನ್ನಿತರ ಸೌಲಭ್ಯಗಳನ್ನು ತೆರೆಯಲಾಗುತ್ತಿದೆ  ಎಂದರು.

ಈ ಯೋಜನೆ  ಕೇವಲ  ಅಗ್ಗದ ದರದ ಔಷಧಿಗಳ ಯೋಜನೆಯಲ್ಲ,  ವಿಶೇಷ  ಚೇತನರ  ಅತ್ಮ ವಿಶ್ವಾಸ   ತುಂಬುವ ಯೋಜನೆಯಾಗಿದೆ  ಎಂದು ಪ್ರಧಾನಿ ಹೇಳಿದರು. ಜನೌಷಧಿ ಕೇಂದ್ರಗಳ ಜೊತೆ  ಗುಣಮಟ್ಟದ ಪರೀಕ್ಷಾ ಕೇಂದ್ರಗಳು,  ವಿತರಣಾ ಕೇಂದ್ರಗಳನ್ನು  ಜೋಡಿಸಲಾಗುತ್ತಿದ್ದು. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ಅವಕಾಶಗಳು ಲಭ್ಯವಾಗಲಿವೆ ಎಂದು ಪ್ರಧಾನಿ ಹೇಳಿದರು. ಕೊರೊನಾ  ವೈರಸ್   ಕುರಿತು ಮಾತನಾಡಿದ ಪ್ರಧಾನಿ,   ಜನರು  ವದತಿಗಳಿಗೆ  ಕಿವಿಗೊಡಬಾರದು,  ಸೋಂಕು ತಗುಲದಂತೆ  ಮುನ್ನಚ್ಚರಿಕೆ ಪಾಲಿಸಲು  ವೈದ್ಯರ ಸಲಹೆ ಪಡೆಯಬೇಕು ಎಂದರು. ಕೆಲ ಸಣ್ಣ ಪುಟ್ಟ  ಕ್ರಮಗಳು ಕೊರೊನಾ ವೈರಸ್   ಸೋಂಕು ಸುಳಿಯದಂತೆ ನೆರವಾಗಲಿವೆ. ಕೇವಲ   ಸರಳ ಮುನ್ನೆಚ್ಚರಿಕೆ   ಕ್ರಮಗಳನ್ನು ಕೈಗೊಂಡು ವೈದ್ಯರ ಸಲಹೆಯಂತೆ ನಡೆದುಕೊಳ್ಳಿ,  ಪ್ರಧಾನಿ  ಸಲಹೆ ನೀಡಿದ್ದಾರೆ. ಇಡೀ ಜಗತ್ತು ಇಂದು ನಮಸ್ತೆ ಸಂಪ್ರದಾಯವನ್ನು ಕಲಿಯುತ್ತಿದೆ. ಕೊರೊನಾವೈರಸ್ ಪಾರಾಗಲು ಇದು  ಸಹಾಯ ಮಾಡಲಿದೆ. ಕರೋನವೈರಸ್ ಕುರಿತ ವದಂತಿಗಳಿಂದ ದೂರವಿರಲು ದೇಶವಾಸಿಗಳಿಗೆ ಮನವಿ ಮಾಡಿರುವ  ಪ್ರಧಾನಿ, ಯಾವುದೇ ಸಮಸ್ಯೆ ಇದ್ದಲ್ಲಿ, ವೈದ್ಯರನ್ನು ಸಂಪರ್ಕಿಸಿ,  ಎಂದು ಪ್ರಧಾನಿ ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT