ಎಐಬಿಇಎ ಪ್ರಧಾನ ಕಾರ್ಯದರ್ಶಿ ಚ. ವೆಂಕಟಾಚಲಂ 
ದೇಶ

ಸಾರ್ವಜನಿಕರ ಹಣ ಖಾಸಗಿ ವ್ಯಕ್ತಿಗಳಿಂದ ಲೂಟಿ, ಖಾಸಗಿ ಬ್ಯಾಂಕ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಿ: ಕೇಂದ್ರಕ್ಕೆ ಎಐಬಿಇಎ ಮನವಿ

ಸಾರ್ವಜನಿಕರ ಕಷ್ಟದ ಹಣವನ್ನು ಕೆಲ ಖಾಸಗಿ ವ್ಯಕ್ತಿಗಳು ಲೂಟಿ ಮಾಡುತ್ತಿದ್ದು, ಯೆಸ್ ಬ್ಯಾಂಕನ್ನು ಸಾರ್ವಜನಿಕ ವಲಯದಡಿ ತರಲು ಎಐಬಿಇಎ ಒತ್ತಾಯ ಖಾಸಗಿ ಬ್ಯಾಂಕ್‌ಗಳನ್ನು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಅಖಿಲ ಭಾರತ ಬ್ಯಾಂಕ್‌ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಆಗ್ರಹಿಸಿದೆ.

ನವದೆಹಲಿ: ಸಾರ್ವಜನಿಕರ ಕಷ್ಟದ ಹಣವನ್ನು ಕೆಲ ಖಾಸಗಿ ವ್ಯಕ್ತಿಗಳು ಲೂಟಿ ಮಾಡುತ್ತಿದ್ದು, ಯೆಸ್ ಬ್ಯಾಂಕನ್ನು ಸಾರ್ವಜನಿಕ ವಲಯದಡಿ ತರಲು ಎಐಬಿಇಎ ಒತ್ತಾಯ ಖಾಸಗಿ ಬ್ಯಾಂಕ್‌ಗಳನ್ನು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಅಖಿಲ ಭಾರತ ಬ್ಯಾಂಕ್‌ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಆಗ್ರಹಿಸಿದೆ.

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), 'ಠೇವಣಿದಾರರು ಮತ್ತು ಬ್ಯಾಂಕಿನ ಗ್ರಾಹಕರ ಹಿತಾಸಕ್ತಿ ಕಾಪಾಡುವ ಸಲುವಾಗಿ, ಯೆಸ್‌ ಬ್ಯಾಂಕ್ ಅನ್ನು ತಕ್ಷಣವೇ ಸಾರ್ವಜನಿಕ ವಲಯದ ವ್ಯಾಪ್ತಿಗೆ ತರಬೇಕು. ಖಾಸಗಿ ವಲಯದ ಬ್ಯಾಂಕ್‌ಗಳು ಒಂದೊಂದಾಗಿ ವೈಫಲ್ಯ ಅನುಭವಿಸುತ್ತಿವೆ. ಸರ್ಕಾರವು ವೈಭವೀಕರಿಸುತ್ತಿರುವ ಖಾಸಗಿ ಬ್ಯಾಂಕುಗಳು ಒಂದೊಂದಾಗಿ ವಿಫಲವಾಗುತ್ತಿವೆ. ಸರ್ಕಾರವು 1969ರಲ್ಲಿ ನಡೆದ ಘಟನೆಯನ್ನು ಪುನರಾವರ್ತಿಸುವ ಸಮಯ ಬಂದಿದೆ. ಎಲ್ಲಾ ಖಾಸಗಿ ಬ್ಯಾಂಕುಗಳನ್ನು ಸಾರ್ವಜನಿಕ ವಲಯದ ಅಡಿಯಲ್ಲಿ ತರಲು ಇದು ಸೂಕ್ತ ಸಮಯ. ಜನರ ಹಣ ಜನರ ಕಲ್ಯಾಣಕ್ಕಾಗಿಯೇ ಹೊರತು ಖಾಸಗಿ ಲೂಟಿಗಾಗಿ ಅಲ್ಲ ಕಿಡಿಕಾರಿದೆ.

ಈ ಕುರಿತಂತೆ ಮಾತನಾಡಿರುವ ಎಐಬಿಇಎ ಪ್ರಧಾನ ಕಾರ್ಯದರ್ಶಿ ಚ. ವೆಂಕಟಾಚಲಂ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 'ಕಷ್ಟಪಟ್ಟು ಉಳಿಸಿದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಡಲಾಗುತ್ತದೆ. ಅದನ್ನು ಬ್ಯಾಂಕ್‌ಗಳು ಸಮರ್ಪಕವಾಗಿ ನಿರ್ವಹಿಸದೇ ಇದ್ದರೆ ಅದಕ್ಕೆ ಕಾರಣರಾದ ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕ್ರಮ ಜರುಗಿಸಬೇಕು. ಬ್ಯಾಂಕುಗಳು ಸಾರ್ವಜನಿಕ ಹಣ ಮತ್ತು ಕಷ್ಟಪಟ್ಟು ಸಂಪಾದಿಸಿದ ಸಾರ್ವಜನಿಕ ಉಳಿತಾಯವನ್ನು ನಿರ್ವಹಿಸುತ್ತವೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ಬ್ಯಾಂಕುಗಳನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದರೆ ಯೆಸ್ ಬ್ಯಾಂಕ್ ಸೇರಿದಂತೆ ಬ್ಯಾಂಕಿನ ಉನ್ನತ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಈ ಘಟನೆಗೆ ಜವಾಬ್ದಾರರಾಗಿರುವವರಿಗೆ ಕಠಿಣ ಶಿಕ್ಷೆಗಳನ್ನು ನೀಡಬೇಕು. ಅವರನ್ನು ಹಾಗೆ ಬಿಟ್ಟು ಬಿಡಬಾರದು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT